ಮುಧೋಳ ರನ್ನ ವೃತ್ತ ಬಳಿ ಬಾಪೂಜಿ ಸಹಕಾರ ಬ್ಯಾಂಕ್ ಶಾಖೆಯನ್ನು ಹಿರಿಯ ಶಾಸಕ ಡಾ. ಶಾಮನೂರ ಶಿವಶಂಕರಪ್ಪ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಎಸ್. ವೀರಣ್ಣ, ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ, ಅಣಬೇರು ರಾಜಣ್ಣ ಇತರರಿದ್ದರು. 
ಜಿಲ್ಲೆ

ಗ್ರಾಹಕರು ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಿ

Vijayapura - Desk - Gurappa Lokuri

ಮುಧೋಳ: ರೈತರು ಹಾಗೂ ಕಾರ್ಮಿಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಬಾಪೂಜಿ ಸಹಕಾರ ಬ್ಯಾಂಕ್ ಶಾಖೆ ಆರಂಭಿಸಲಾಗುತ್ತಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಾಪೂಜಿ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಡಾ. ಶಾಮನೂರ ಶಿವಶಂಕರಪ್ಪನವರ ಹೇಳಿದರು.

ನಗರದ ರನ್ನ ಸರ್ಕಲ್ ಬಳಿ ದಾವಣಗೆರೆಯ ಬುಧವಾರ ಬಾಪೂಜಿ ಸಹಕಾರ ಬ್ಯಾಂಕ್ ಒಂಬತ್ತನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಬ್ಯಾಂಕ್ ಭದ್ರತಾ ಕೊಠಡಿ ಉದ್ಘಾಟಿಸಿದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಎಸ್. ವೀರಣ್ಣ, ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ, ಅಣಬೇರು ರಾಜಣ್ಣ, ಡಾ.ಎಚ್.ಬಿ. ಮಂಜುನಾಥ, ಎಸ್.ಕೆ. ವೀರಣ್ಣ, ಐಸಿಪಿಎಲ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳಾದ ಪ್ರಕಾಶ, ಮಾರುತಿ, ಪ್ರಭು ಪಾಟೀಲ, ಬಸವಪ್ರಭು, ಎಂ.ವಿ. ದ್ಯಾಬಿಮಠ, ಶಾಖೆಯ ವ್ಯವಸ್ಥಾಪಕ ರೇವಣಪ್ಪ ಹಾಗೂ ಸಿಬ್ಬಂದಿ ಇದ್ದರು.