ಶ್ರೀನಿವಾಸ ವಿವಿ ನೂತನ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕುಲಾಧಿಪತಿ ದಿ. ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರನ್ನು ಸ್ಮರಿಸಲಾಯಿತು. ಡಾ. ಎ. ಶ್ರೀನಿವಾಸ ರಾವ್, ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇ.ಆರ್. ಎ. ಮಿತ್ರಾ ಎಸ್. ರಾವ್ ಇದ್ದರು.
- ಶ್ರೀನಿವಾಸ್ ವಿವಿ: ನೂತನ ವಿದ್ಯಾರ್ಥಿಗಳ ಶುಭಾರಂಭ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಟೂರಿಸಂ ವತಿಯಿಂದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗಾಗಿ ಓರಿಯಂಟೇಶನ್ ಕಾರ್ಯಕ್ರಮ ಜು. 17ರಂದು ಮಂಗಳೂರಿನ ಹೋಟೆಲ್ ಶ್ರೀನಿವಾಸ್‌ನ ವೈಕುಂಠ ಸಭಾಂಗಣದಲ್ಲಿ ನಡೆಯಿತು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಎ. ಶಾಮರಾವ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎ. ಶ್ರೀನಿವಾಸ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿಶ್ವವಿದ್ಯಾಲಯದ ಪಠ್ಯಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ, ಪ್ರಾಯೋಗಿಕ, ವೃತ್ತಿಪರ ಹಾಗೂ ವೈಯಕ್ತಿಕ ಬೆಳವಣಿಗೆಯನ್ನು ಸಮಗ್ರವಾಗಿ ರೂಪಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದರು.
ಬಹುಮುಖ ಕೌಶಲ ಬೆಳೆಸಿಕೊಳ್ಳಿ
ಆತಿಥ್ಯ ನಿರ್ವಹಣೆ, ಇಂಟೀರಿಯರ್ ಡಿಸೈನ್, ಅನಿಮೇಶನ್ ಹಾಗೂ ಸಮೂಹ ಸಂವಹನ ಕ್ಷೇತ್ರಗಳ ನಿರಂತರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಸೃಜನಶೀಲತೆ, ನಾಯಕತ್ವ, ಸಂವಹನ ಕೌಶಲ, ವ್ಯಕ್ತಿತ್ವ ವಿಕಸನ ಹಾಗೂ ಬಹುಮುಖ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದ ಅವರು, ತಮ್ಮ ಮಕ್ಕಳ ಪ್ರಗತಿಯ ಕುರಿತು ಪೋಷಕರು ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಮನವಿ ಮಾಡಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್‌ನ ಟ್ರಸ್ಟಿ ಸದಸ್ಯೆ ವಿಜಯಲಕ್ಷ್ಮಿ ಆರ್. ರಾವ್ ಅವರು ನೂತನ ವಿದ್ಯಾರ್ಥಿಗಳನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಟುಂಬಕ್ಕೆ ಸ್ವಾಗತಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್‌ನ ಟ್ರಸ್ಟಿ ಸದಸ್ಯೆ ಪ್ರೊ. ಇ.ಆರ್. ಎ. ಮಿತ್ರಾ ಎಸ್. ರಾವ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯೆ ಎ. ಸಮಾನಾ ಎಸ್. ರಾವ್ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟ್ರಾರ್ ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.
ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಆ್ಯಂಡ್ ಟೂರಿಸಂನ ಡೀನ್ ಪ್ರೊ. ಬಿ. ಪ್ರಶಾಂತ್ ಪ್ರಭು ಸ್ವಾಗತಿಸಿದರು. ಡಾ. ಜೀತಾ ವಂದಿಸಿದರು. ಪ್ರೊ. ಪ್ರಜ್ಞಾ ಕೊಡಿಲಾಳ, ಪ್ರೊ. ಪ್ರಿಯಾಂಕ ಪ್ರಭು, ಪ್ರೊ. ಸುಪ್ರಿಯಾ ಅಡಿಗ ಅವರು ಕಾರ್ಯಕ್ರಮ ನಿರೂಪಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿ ದಿ. ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರನ್ನು ಸ್ಮರಿಸಲಾಯಿತು.