ಜಿಲ್ಲೆ

ಅಪೋಲೋ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸ್ಕಾಯ್ ಪಠ್ಯಕ್ರಮ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಕಾಶ್ಮೀರ ಮೂಲದ ಸಮರ ಕಲೆ (ಮಾರ್ಷಲ್ ಆರ್ಟ್ಸ್)ಯಾಗಿರುವ ಸ್ಕಾಯ್ ಅನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿಕೊಳ್ಳಲು ಅಪೋಲೋ ನ್ಯಾಷನಲ್ ಪಬ್ಲಿಕ್ ಶಾಲೆ ಮುಂದಾಗಿದೆ.

ಜುಲೈ 25, ಗುರುವಾರ ಸ್ಕಾಯ್ ಸಮರ ಕಲೆಯನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸಲಿದ್ದು, ಶಾಲಾ ಮಕ್ಕಳಲ್ಲಿ ದೈಹಿಕ ಕ್ಷಮತೆ ಹೆಚ್ಚಳ ಹಾಗೂ ಸಾಂಸ್ಕೃತಿಕ ಪರಂಪರೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡಲಾಗುತ್ತಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತೀಯ ಸ್ಕಾಯ್ ಫೆಡರೇಶನ್ ಜಂಟಿ ಕಾರ್ಯದರ್ಶಿ ಮೊಹಮದ್ ಅಲಿ, ಅಪೋಲೋ ನ್ಯಾಶನಲ್ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಐಶ್ವರ್ಯ ಡಿಕೆಎಸ್ ಹೆಗ್ಡೆ, ಅಂತಾರಾಷ್ಟ್ರೀಯ ಸ್ವರ್ಣ ಪದಕ ವಿಜೇತೆ ಸಾನಿಯಾ ಸುಭಾಷ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನುರಿತ ಸ್ಕಾಯ್ ಪಟುಗಳು ದೈಹಿಕ ಕ್ಷಮತೆ, ಮಾನಸಿಕ ಏಕಾಗ್ರತೆ ಹಾಗೂ ಆಧ್ಯಾತ್ಮದ ಶಿಸ್ತು ಹೊಂದಿರುವ ಈ ಕಲೆಯ ಪ್ರದರ್ಶನ ಮಾಡಲಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ನೆರವಾಗುವ ಈ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸುವ ಮೂಲಕ, ಈ ಕಲೆಯ ಮೇಲಿರುವ ಬದ್ಧತೆ ಹಾಗೂ ಕಾಳಜಿಯನ್ನು ಶಾಲೆಯ ಪ್ರಾಂಶುಪಾಲರಾದ ಡಾ. ವೇದಾವತಿ ಬಿ.ಎ ವ್ಯಕ್ತಪಡಿಸಿದ್ದಾರೆ.