ಕಾರವಾರ: ವಿದ್ಯುತ್ ಶಾಕ್ ನಿಂದ ಚಿರತೆ, ಕಾಡು ಬೆಕ್ಕು ಸಾವನ್ನಪ್ಪಿದ ಘಟನೆ ಶುಕ್ರವಾರ ಶಿರಸಿಯ ನೀರ್ನಳ್ಳಿ ಬಳಿ ನಡೆದಿದೆ.
ಕಾಡು ಬೆಕ್ಕು ಹಿಡಿಯಲು ಚಿರತೆ ವಿಧ್ಯುತ್ ಕಂಬವೇರಿತ್ತು.ಆದರೆ ಕಾಡು ಬೆಕ್ಕು ಶಾಕ್ ನಿಂದ ಸಾವನ್ನಪ್ಪಿದೆ. ಅದರ ಬೆನ್ನಲ್ಲೇ ಚಿರತೆ ಕೂಡ ಕಂಬದ ಮೇಲೆಯೇ ಶಾಕ್ ತಗುಲಿ ಮೃತಪಟ್ಟಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಮೃತಪಟ್ಟ ಚಿರತೆ ಸುಮಾರು ಮೂರು ವರ್ಷದ್ದಿರಬಹುದು ಎಂದು ಅದಾಜಿಸಲಾಗಿದೆ.