ಜಿಲ್ಲೆ

ಧರೆಗುರುಳಿದ ವಿದ್ಯುತ್ ಕಂಬಗಳು

ಅಶೋಕ್ ಕುಮಾರ್ ಎನ್

ದೇವದುರ್ಗ: ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಬೀಸಿದ ಬಿರುಗಾಳಿಯಿಂದ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಮಳೆಗಿಂತ ಗಾಳಿ, ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಪಟ್ಟಣದ ಗೌರಂಪೇಟೆ, ನಗರಗುಂಡ, ತಾಲೂಕಿನ ಹೇಮನೂರು, ಇರಬಗೇರಾ, ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ, ಗಲಗ, ಮಲ್ಲಾಪುರ ಸೇರಿ ವಿವಿಧೆಡೆ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ.

ಕ್ಯಾದಿಗೇರಾ, ಕೊಪ್ಪರ, ಹೂವಿನೆಹಡಗಿ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕೊಪ್ಪರ, ಹೂವಿನಹೆಡಗಿ, ದೇವರ ಗುಂಡಗುರ್ತಿ ಸೇರಿ ವಿವಿಧೆಡೆ ನೂರಾರು ಮರಗಳು ನೆಲಕ್ಕುರುಳಿವೆ. ಪಟ್ಟಣ ಸೇರಿ ವಿವಿಧೆಡೆ ರಸ್ತೆ ಮೇಲೆ ನೀರು ನಿಂತು ಜನರ ಸಂಚಾರಕ್ಕೆ ಸಮಸ್ಯೆಯಾಯಿತು. ಹಳ್ಳಿಗಳಲ್ಲಿ ಕರೆಂಟ್ ಇಲ್ಲದೆ ಕುಡಿವ ನೀರು ಪೂರೈಕೆಯಲ್ಲಿ ತೊಂದರೆ ಆಯಿತು. ಹಿಟ್ಟಿನ ಗಿರಣಿಗಳು ಕಾರ್ಯನಿರ್ವಹಿಸದೆ ಕೂಡ ಜನರು ಸಮಸ್ಯೆ ಎದುರಿಸಿದರು.