ಗ್ರಾಪಂಗಳಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಪಿಂಟು ಗೊಬ್ಬೂರ, ಮಕದಸ್​ ಇನಾಮದಾರ, ಸಂಗಮೇಶ ಎಸ್​. ದಾಶ್ಯಾಳ ಮತ್ತಿತರರಿದ್ದಾರೆ. 
ಜಿಲ್ಲೆ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

ಗಿರೀಶ ಸಗರ

ವಿಜಯಪುರ: ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಅವ್ಯವಹಾರ ಮತ್ತು ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ಜತೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಟನೆ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಸಂಟನೆ ಜಿಲ್ಲಾಧ್ಯಕ್ಷ ಸಂಗಮೇಶ ಎಸ್​. ದಾಶ್ಯಾಳ ಮಾತನಾಡಿ, ಸರ್ಕಾರವು ಗ್ರಾಪಂಗಳಿಂದ ಗ್ರಾಮಗಳ ಅಭಿವೃದ್ಧಿ ಹೊಂದಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಮುಖ್ಯವಾಗಿ ಗ್ರಾಮಗಳ ಮೂಲ ಸೌಕರ್ಯಗಳಾದ ನೈರ್ಮಲೀಕರಣ ಮತ್ತು ನೀರು ನಿರ್ವಹಣೆಯ ಯೋಜನೆಗಳು ಸಮಾಜಮುಖಿಯಾಗಿ ಅತ್ಯುತ್ತಮ ರೀತಿಯಲ್ಲಿ ಅನುಷ್ಠಾನವಾಗುತ್ತಿಲ್ಲ. ಅಲ್ಲದೆ, ಪಿಡಿಒಗಳು ಪ್ರತಿ ವಾರ್ಡಿಗೆ ಅಕೌಂಟ್​ ತೆಗೆಸಿ ವಾರ್ಡಿನ ಕರ ವಸೂಲಿ ಅಧಿಕಾರ ಅವರಿಗೆ ನೀಡಿದ್ದರೂ ಯಾವುದೇ ಕೆಲಸಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ಆದ್ದರಿಂದ ಮೇಲ್ಕಾಣಿಸಿದ ಎರಡೂ ಸಮಿತಿಗಳ ಅನುಷ್ಠಾನ ಸರಕಾರದ ಸುತ್ತೋಲೆ ಪ್ರಕಾರ ನಡೆಯಬೇಕು. ತ್ವರಿತವಾಗಿ ನಮ್ಮ ಮನವಿಗೆ ಜಿಲ್ಲಾಡಳಿತ ಸ್ಪಂದಿಸಬೇಕು. ಇಲ್ಲದಿದ್ದರೆ, ಕಾನೂನು ರೀತಿಯಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಿಂಟು ಗೊಬ್ಬೂರ, ಮಕದಸ್​ ಇನಾಮದಾರ, ಶಿವನಗೌಡ ಪಾಟೀಲ, ಆನಂದ ಹೊನ್ನೂರ, ಚನ್ನಪ್ಪಗೌಡ ಬಿರಾದಾರ, ಸಂಗಮೇಶ ಹಿರೇಮಠ, ಸುಜಾತಾ ಪೂಜಾರಿ, ಮಲ್ಲಮ್ಮ ಲಮಾಣಿ, ಬೇಬಿ ತಳವಾರ, ಕವಿತಾ ಅಹೊಳ್ಳಿ, ನಾಗಮ್ಮ ವಾಲಿಕಾರ, ಬಾನು ಹತ್ತರಕಿಹಾಳ, ಕವಿತಾ ಖಿಲಾರಿ, ಅಶ್ವಿನಿ ಸಾವಂತ ಮತ್ತಿತರರಿದ್ದರು.