ಜಿಲ್ಲೆ

ಗೊಲ್ಲ, ಮ್ಯಾಸಬ್ಯಾಡರ ಸಂಸ್ಕೃತಿ ಶ್ರೀಮಂತ: ಶಾಸಕ ರಘುಮೂರ್ತಿ ಅಭಿಮತ

ಹರ್ಷ ನ.ಪುರೋಹಿತ

ಪರಶುರಾಮಪುರ: ಗೊಲ್ಲ, ಮ್ಯಾಸಬ್ಯಾಡ ಸಮುದಾಯ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಗ್ರಾಮದ ಹೊರವಲಯದ ಕಾಟಂಲಿಂಗೇಶ್ವರ ತಿಮ್ಮಪ್ಪಸ್ವಾಮಿ, ಈರಬಗ್ಗಣ್ಣಸ್ವಾಮಿ ಸಮೂಹದ ದೇವರುಗಳ ದೇವಸ್ಥಾನದಲ್ಲಿ ಭಾನುವಾರ ಗುಡಿಕಟ್ಟೆಯವರು ಆಯೋಜಿಸಿದ್ದ ದೇವರ ಉತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಮ್ಯಾಸಬ್ಯಾಡ ಮತ್ತು ಕಾಡುಗೊಲ್ಲರು ಇಂದಿನ ಆಧುನಿಕ ಕಾಲಘಟ್ಟದಲ್ಲೂ ಪಶುಪಾಲನೆ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಗುಡಿಕಟ್ಟೆಯ ದೇವಸ್ಥಾನಗಳಲ್ಲಿ ದೇವರ ಹಸು-ಎತ್ತುಗಳನ್ನು ಸಾಕುವ ಪದ್ಧದಿ ಇದೆ ಎಂದರು.

ಆದರೆ, ಇತ್ತೀಚೆಗೆ ಮಳೆ ಕೊರತೆ ಹಿನ್ನೆಲೆಯಲ್ಲಿ ದೇವರ ಎತ್ತುಗಳಿಗೆ ಮೇವು ನೀರು ಕೊರತೆ ಆಗಿದ್ದು, ಸರ್ಕಾರದಿಂದ ಒದಗಿಸಲು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಗಮನಸೆಳೆದಿದ್ದೇನೆ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಕೃಷ್ಣಪ್ಪ, ಸರೋಜಾ ಚಿತ್ತಯ್ಯ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ಕರಿಯಣ್ಣ, ದಾಸಣ್ಣ, ತಿಮ್ಮಣ್ಣ, ಚಿಕ್ಕಣ್ಣ ಇತರರು ಪಾಲ್ಗೊಂಡಿದ್ದರು.