ಜಿಲ್ಲೆ

ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರವೂ ಮುಖ್ಯವಾಗಿದೆ. ಇಂತಹ ಶಿಕ್ಷಣವನ್ನು ವನಿತಾ ಶಿಕ್ಷಣ ಸಂಸ್ಥೆ ನೀಡುತ್ತಿರುವುದು ಶ್ಲಾನೀಯ ಎಂದು ಪೊಲೀಸ್​ ಇನ್​ಸ್ಪೆಕ್ಟರ್​ ಎನ್​.ಸಿ. ಕಾಡದೇವರಮಠ ಹೇಳಿದರು.
ನಗರದ ವನಿತಾ ಮಹಿಳಾ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಒಕ್ಕೂಟ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರ ರಕ್ಷಣೆ ಹಾಗೂ ಪೋಕ್ಸೊ ಕಾಯಿದೆ ಕುರಿತು ಮಾಹಿತಿ ನೀಡಿದ ಅವರು, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಬೇಕು ಎಂದರು.
ಉದ್ಯಮಿ ಶ್ರವಣ ನೇಮಿಚಂದ್ರ ಜೈನ ಮಾತನಾಡಿ, ವಿದ್ಯಾರ್ಥಿಯರು ಸತತ ಪರಿಶ್ರಮದಿಂದ ಅತೀ ಹೆಚ್ಚಿನ ಕ್ಷೇತ್ರಗಳಲ್ಲಿ ಆಯ್ಕೆ ಆಗಬೇಕು. ಸೃಜನಶೀಲತೆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸಿ ತಮ್ಮಲ್ಲಿನ ನಾವಿನ್ಯತೆ ಪ್ರದರ್ಶಿಸಬೇಕು ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಕಾರ್ಯದರ್ಶಿ ಮಧುರಾ ಹೆಗಡೆ, ನಿರ್ದೇಶಕರಾದ ಸಂಜಯ ಕಬ್ಬೂರ, ದಾನಪ್ಪ ಕಬ್ಬೇರ, ಕಾಲೇಜಿನ ಪ್ರಾಚಾರ್ಯ ಆರ್​.ಬಿ.ದೊಡಮನಿ, ಉಪನ್ಯಾಸಕರು, ಸಿಬ್ಬಂದಿ, ಇತರರು ಇದ್ದರು.
ರೇಣುಕಾಚಾರ್ಯ ಹಿರೇಮಠ ಸ್ವಾಗತಿಸಿದರು. ಶುಭಾ ಪರೀಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಕೋಟೆಕಲ್ಲೂರ ಹಾಗೂ ಪ್ರಕೃತಿ ನಾಗನೂರ ನಿರೂಪಿಸಿದರು.