ಜಿಲ್ಲೆ

ಸಂಸ್ಕೃತಿ, ಪರಂಪರೆ ಪರಿಚಯಿಸುವ ಕಾರ್ಯ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ, ದೀಮತಿ ಮಹಿಳಾ ಸಂಘ, ಉಜಿರೆ ಜಂಟಿ ಆಶ್ರಯದಲ್ಲಿ ಆಷಾಢ ಮಾಸದ ವಿಶೇಷ ಆಹಾರೋತ್ಸವ ಕಾರ್ಯಕ್ರಮ ನಡೆಯಿತು.

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ, ಧೀಮತಿ ಮಹಿಳಾ ಸಂಘ, ಉಜಿರೆ ಇದರ ಗೌರವ ಸಲಹೆಗಾರ ಸೋನಿಯಾ ಯಶೋವರ್ಮ ಮಾತನಾಡಿ ನಮ್ಮ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ. ಔಷಧೀಯ ಗುಣ, ಕಾಲಕ್ಕೆ ಹೊಂದುವ ಪದಾರ್ಥ ವಸ್ತುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

ವಲಯ ನಿರ್ದೇಶಕ ಬಿ.ಪ್ರಮೋದ್ ಕುಮಾರ್ ಮಾತನಾಡಿ, ಪ್ರತಿ ಮಾಸಕ್ಕೂ ಅದರದ್ದೇ ಆದ ಮಹತ್ವ ಇದೆ. ಪರಂಪರೆ ಬೆಳೆಸಿಕೊಂಡು ಹೋಗಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದರು.

ವಲಯ ನಿರ್ದೇಶಕ ಸೋಮಶೇಖರ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಷಾಢ ಮಾಸದ ತಿಂಡಿ ತಿನಿಸುಗಳು ಇಂದು ಆಹಾರೋತ್ಸವವಾಗಿ ಆಚರಿಸಲ್ಪಡುತ್ತವೆ. ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿ ಅನುಸರಿಸುವುದರಿಂದ ಕಾಯಿಲೆಗಳಿಂದ ದೂರ ಇರಬಹುದು ಎಂದರು. ಧೀಮತಿ ಮಹಿಳಾ ಸಮಾಜ ಅಧ್ಯಕ್ಷೆ ರಜತ ಪಿ.ಶೆಟ್ಟಿ ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥ ಉಪಯೋಗಿಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ಜೈನ್ ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್ ಮಾತನಾಡಿದರು. ಧೀಮತಿ ಮಹಿಳಾ ಸಮಾಜ ಕಾರ್ಯದರ್ಶಿ ದಿವ್ಯಾ ಪ್ರಧಾನ್ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ನಿರೂಪಿಸಿದರು. ನಿಖಿತ್ ಕುಮಾರ್ ವಂದಿಸಿದರು. ಖಾದ್ಯಗಳನ್ನು ತಯಾರಿಸಿದ ಅಳದಂಗಡಿಯ ಸುನೀಲ್ ಕುಮಾರ್ ಜೈನ್ ಪ್ರಶಂಸೆಗೆ ಪಾತ್ರರಾದರು.