ಜಿಲ್ಲೆ

ಮನಸೂರೆಗೊಂಡ ಜಾನಪದ ಸಾಂಸ್ಕೃತಿಕ ಸಂಭ್ರಮ

ಸೌಮ್ಯ ಆರ್

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾದವು. ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಪ್ರದರ್ಶಿಸಲ್ಪಟ್ಟ ಜನಪದೀಯ ನೃತ್ಯ ಸಿಂಚನ ಸರ್ವ ಮನಸೂರೆಗೊಂಡಿತು.

ವಿದ್ಯಾರ್ಥಿಗಳಿಂದ ಕೊಳಲು ಮತ್ತು ಸ್ಯಾಕ್ಸೋಪೋನ್ ವಾದನ ನಡೆಯಿತು. ಮಹಾಭಾರತ, ನವಶಕ್ತಿ ವೈಭವ ನೃತ್ಯ ರೂಪಕ ಪ್ರದರ್ಶಿಸಿದರು. ಸಂಯೋಜಕ ಪ್ರಾಚಾರ್ಯ ಸೋಮಶೇಖರ ನಾಯಕ್, ನಿರ್ದೇಶಕಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಅವರನ್ನು ಸಮಿತಿ ಅಧ್ಯಕ್ಷ ದಿನೇಶ್ ಮೊಗ್ರ ಗೌರವಿಸಿದರು. ಉಪನ್ಯಾಸಕ ಜಯಪ್ರಕಾಶ್.ಆರ್ ಉಪಸ್ಥಿತರಿದ್ದರು.

ಶ್ರೀ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ ನೆರವೇರಿತು. ಬಳಿಕ ಕೀರ್ತನಾಗ್ರೇಸರ ವೈ.ಅನಂತ ಪದ್ಮನಾಭ ಭಟ್ ಕಾರ್ಕಳ ಇವರಿಂದ ಹರಿಕಥಾ ಸತ್ಸಂಗ ದಾನಶೂರ ಕರ್ಣ ನೆರವೇರಿತು. ಸಮಿತಿ ಅಧ್ಯಕ್ಷರು ಕಲಾವಿದರಿಗೆ ಮತ್ತು ಕಾರ್ಯಕ್ರಮದ ಸಂಯೋಜಕ ಸಮಿತಿ ಪೂರ್ವಾಧ್ಯಕ್ಷ ಲೋಕೇಶ್ ಎನ್.ಎಸ್, ಪ್ರಾಚಾರ್ಯ ಡಾ.ದಿನೇಶ್ ಪಿ.ಟಿ ಹಾಗೂ ಸಂಯೋಜಕ ಡಾ.ವಿನ್ಯಾಸ್ ಹೊಸೋಳಿಕೆ ಅವರನ್ನು ಗೌರವಿಸಲಾಯಿತು.

ಇಂದು ಕೆ.ಎಸ್ ಸುರೇಖಾರಿಂದ ಸ್ವರ ಮಾಧುರ‌್ಯ

ಸೋಮವಾರ ಕುಕ್ಕೆಯ ಕುವರಿ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕಿ ಕೆ.ಎಸ್.ಸುರೇಖಾ ಅವರಿಂದ ಭಕ್ತಿ,ಭಾವ ಮತ್ತು ಜನಪದಗೀತೆಗಳ ಸಂಗಮ ಸ್ವರ ಮಾಧುರ‌್ಯ ಪ್ರದರ್ಶಿತವಾಗಲಿದೆ. ಬಳಿಕ ದೇವಿಕಿರಣ್ ಕಲಾನಿಕೇತನ ಉಜಿರೆಯ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪ್ರಥ್ವಿ ಸತೀಶ್ ಅವರ ಶಿಷ್ಯರಿಂದ ನೃತ್ಯಾರ್ಪಣಂ ಜರುಗಲಿದೆ. ಮಂಗಳವಾರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಕಲ್ಜಿಗದ ಮಾಯ್ಕರೆ ಪಂಜುರ್ಲಿ ನಾಟಕ ಪ್ರದರ್ಶನವಾಗಲಿದೆ. ಬುಧವಾರ ಯಶಸ್ವಿ ಭಕ್ತಿ ಪ್ರದಾನ ತುಳು ನಾಟಕ ಶಿವದೂತೆ ಗುಳಿಗೆ ನಾಟಕ ನಡೆಯಲಿದೆ.