ಗುರುಪುರ: ಧ್ವನಿ ಬೆಳಕು ಮಾಲೀಕರ ಸಮಸ್ಯೆ, ಕಷ್ಟ ನನಗೆ ತಿಳಿದಿದೆ. ಅವರ ಜೀವನ ಕಷ್ಟದ ಜೀವನ, ನಿಮ್ಮ ಸಂಘಟನೆ ಇರುವುದರಿಂದ ನಿಮ್ಮ ಒಗ್ಗಟ್ಟು, ಎದ್ದು ಕಾಣುತ್ತಿದೆ. ಸಂಘಟನೆಯಿಂದ ಒಗ್ಗಟ್ಟು ಎದ್ದು ಕಾಣುತ್ತದೆ. ಸಂಘಟನೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಕಾವೂರು ಕೇಂದ್ರ ಮೈದಾನದಲ್ಲಿ ಮಂಗಳೂರು ತಾಲೂಕಿನ ಕಾವೂರು ವಲಯದ ಧ್ವನಿ ಬೆಳಕು ಮಾಲೀಕರ ಸಂಘದ ಆಶ್ರಯದಲ್ಲಿ 3ನೇ ವರ್ಷದ ಧ್ವನಿ ಬೆಳಕು ಮಾಲೀಕರ ‘ಸಂಭ್ರಮ್ 2025’ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಸದನದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ. ನಿಮ್ಮ ಜತೆಯಲ್ಲಿ ನಾವಿದ್ದೇವೆ ಎಂದರು.
ಧ್ವನಿ ಬೆಳಕು ಮಾಲೀಕರ ಸಂಘದ ಅಧ್ಯಕ್ಷ ಬೆನಟ್ ಡಿಸಿಲ್ವ ಶುಭಹಾರೈಸಿದರು. ಬಿಜೆಪಿ ಮುಖಂಡ ರಾಜೇಶ್ ಅಮೀನ್ ಪೊರ್ಕೊಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಲೋಯ್ ನೋರೋನೋ, ಮೂಸಬ್ಬ, ಮೊಸರು ಕುಡಿಕೆ ಸಮಿತಿ ದಾನದತ್ತಿ ಪ್ರತಿಷ್ಠಾನ ಕಿಶೋರ್ ಸುವರ್ಣ, ಸುಮಂತ್ ರಾವ್ ಕಾವೂರು, ಲೋಕೇಶ್ ಭಂಡಾರಿ ಕಾವೂರು, ಚಂದ್ರಹಾಸ ಕೈಕಂಬ, ಜಗದೀಶ್ ಭಟ್, ಸುಕುಮಾರ್, ಸಂದೀಪ್ ಪೂಜಾರಿ, ನಿತ್ಯಾನಂದ ಮಂಗಳೂರು ಉಪಸ್ಥಿತರಿದ್ದರು.
ಪ್ರಿಯಾ ಹರೀಶ್ ನಿರೂಪಿಸಿ. ವಿಶ್ವನಾಥ ದೇವಾಡಿಗ ಸ್ವಾಗತಿಸಿ, ದಾಮೋದರ್ ಭಾಗವತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ, ಚಾಪರ‌್ಕ ಕಲಾವಿದರಿಂದ ‘ಎನ್ನನೇ ಕಥೆ’ ತುಳು ನಾಟಕ ಪ್ರದರ್ಶನಗೊಂಡಿತು.