ಕೊಳ್ಳೇಗಾಲ ಪಟ್ಟಣದಲ್ಲಿರುವ ಚಾಮರಾಜನಗರ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ನಿವಾಸದಲ್ಲಿ ಜಗಜ್ಯೋತಿ ಬಸವಣ್ಣ ನವರ ಜಯಂತಿ ಆಚರಣೆ ಮಾಡಲಾಯಿತು. ಎನ್.ಮಹೇಶ್, ಮಹದೇವಪ್ರಸಾದ್, ಎನ್.ವಿ. ಪರಮೇಶ್ವರಯ್ಯ, ಶಿವಕುಮಾರ್, ಸಿದ್ದಪ್ಪಾಜಿ ಇತರರು ಇದ್ದರು. 
ಜಿಲ್ಲೆ

ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣ

ಲೋಕೇಶ್ ಮನು. ಡಿ

ಕೊಳ್ಳೇಗಾಲ: ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣ ಅವರ ತತ್ವವನ್ನು ಪಾಲನೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ಪಟ್ಟಣದಲ್ಲಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣ ಅವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.


12ನೇ ಶತಮಾನದ ಮಹಾನ್ ವಚನಕಾರ, ಸಾಹಿತ್ಯದ ಕ್ರಾಂತಿಕಾರಿ ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತವಾದದ್ದು. ಬಸವಣ್ಣನ ತತ್ವ ಪಾಲನೆಯಿಂದ ಮೊದಲು ನಾವು ಶುದ್ಧಿಯಾಗಿ ನಂತರ ನಮ್ಮ ನಡುವಿನ ಸಮಾಜವನ್ನು ಶುದ್ಧಿ ಮಾಡಬಹುದಾಗಿದೆ ಎಂದರು.


ಮೊದಲ ಬಾರಿಗೆ ಈ ರೀತಿ ತತ್ವವನ್ನು ಕ್ರಿ.ಪೂ. 6ನೇ ಶತನಮಾನದಲ್ಲಿ ಭಗವಾನ್ ಬುದ್ಧರು ಪಂಚಶೀಲ ತತ್ವಗಳಾಗಿ ಬೋಧಿಸಿದ್ದರು. 12ನೇ ಶತಮಾನದಲ್ಲಿ ಬಸವಣ್ಣ ಬೋಧಿಸಿದರು ಎಂದರು. ಇದಕ್ಕೂ ಮುನ್ನ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಗಣ್ಯರು ಹಾಗೂ ಮುಖಂಡರು ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಹದೇವಪ್ರಸಾದ್, ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ, ಎಸ್ಸಿ ಮೋರ್ಚಾ ಟೌನ್ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಮಹದೇವಮ್ಮ, ರಾಜಶೇಖರ್, ಮಹದೇವಪ್ಪ ಮತ್ತಿತರಿದ್ದರು.