ಕುಂದಾಪುರ: ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಸಹಯೋಗದಲ್ಲಿ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ಡಿ.7ರಂದು ನಡೆಯಲಿರುವ ಉಡುಪಿ ಜಿಲ್ಲಾ ಮಟ್ಟದ ಅಂತರ್ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ಹೆಜ್ಜೆ ಗೆಜ್ಜೆ ಮೊಗವೀರ ಸಾಂಸ್ಕೃತಿಕ ಸಿಂಚನ-2024 ಇದರ ಪೋಸ್ಟರ್ ಬಿಡುಗಡೆ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಗುರುವಾರ ನಡೆಯಿತು.
ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಯಂತ್ ಅಮೀನ್ ಕೊಡಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬೈ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಸಂಘದ ಪ್ರಮುಖರಾದ ಉದಯ್ ಕುಮಾರ್ ಹಟ್ಟಿಯಂಗಡಿ, ದಿನೇಶ್ ಬಿ, ರಾಜೇಂದ್ರ ಹಿರಿಯಡ್ಕ, ರವೀಂದ್ರ ಪುತ್ರನ್, ಎಂ.ಎಂ.ಸುವರ್ಣ, ಎನ್.ಎಚ್. ಬಗ್ವಾಡಿ, ಗಣೇಶ್ ಮೆಂಡನ್, ಪ್ರಭಾಕರ್ ಸೇನಾಪುರ, ರಮೇಶ ಕುಂದರ್ ಕೋಟ, ರವೀಶ್ ಎಸ್, ನಾಣು ಡಿ. ಚಂದನ್, ಜಯಂತ್ ಕುಂದರ್, ಜಗದೀಶ್ ನೆಂಪು, ಶ್ಯಾಮಲಾ ಗೋಪಾಲ ಚಂದನ್, ರಾಜು ಎನ್. ಶ್ರೀಯಾನ್, ವಾಸು ಜಿ. ನಾಯ್ಕ, ಆನಂದ್ ನಾಯ್ಕ, ಶೋಭಾ ಜಿ. ಪುತ್ರನ್, ಪದಾಧಿಕಾರಿಗಳು ಇತರರಿದ್ದರು. ಲೋಹಿತಾಶ್ವ ಆರ್. ಕುಂದರ್ ನಿರೂಪಿಸಿದರು.