ಜಿಲ್ಲೆ

ಕೀಲಾರ ಗ್ರಾಮದಲ್ಲಿ ಮಾ.1ರಿಂದ 4ರವರೆಗೆ ಸಾಂಸ್ಕೃತಿಕ ಉತ್ಸವ: ಕ್ಷೀರಸಾಗರ ಮಿತ್ರಕೂಟದಿಂದ ಆಯೋಜನೆ

ಮಂಡ್ಯ: ಕ್ಷೀರಸಾಗರ ಮಿತ್ರಕೂಟದಿಂದ ತಾಲೂಕಿನ ಕೀಲಾರ ಗ್ರಾಮದ ಮಾರಿಗುಡಿ ಆವರಣದಲ್ಲಿ ಮಾ.1ರಿಂದ 4ರವರೆಗೆ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.

1ರಂದು ರಾತ್ರಿ 7.30ಕ್ಕೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ 9ಗಂಟೆವರೆಗೆ ಜನಪದ ಗೀತೆಗಳ ಗಾಯನ ಹಾಗೂ ನಂತರ ವಿ.ಎನ್.ಅಶ್ವಥ್ ರಚನೆಯ ಎಚ್.ಎನ್.ಭೀಮೇಶ್ ನಿರ್ದೇಶನದ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನವಿರಲಿದೆ. 2ರಂದು ರಾತ್ರಿ 7.30ಕ್ಕೆ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ರಾಯಭಾರಿ ಸಚ್ಚಿದಾನಂದ ಹಾಗೂ ರಂಗಕರ್ಮಿ ಶಿವರಾಂ ನೆನಪು ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉದ್ಘಾಟಿಸಲಿದ್ದು, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ 9ಗಂಟೆವರೆಗೆ ಕೀಲಾರ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಚಿಣ್ಣರ ಜನಪದ ನೃತ್ಯ, ನಂತರ ಅತೋಲ್ ಫ್ಯೂಗಾರ್ಡ್ ರಚನೆಯ, ಡಾ.ಶ್ರೀಪಾದ್ ಭಟ್ ನಿರ್ದೇಶನದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

3ರಂದು ರಾತ್ರಿ 7.30ಕ್ಕೆ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಸಂಭ್ರಮ ವೇದಿಕೆ ಕಾರ್ಯಕ್ರಮವನ್ನು ಅಭಿನವ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ಉದ್ಘಾಟಿಸಲಿದ್ದು, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ 9ಗಂಟೆವರೆಗೆ ಹನಕೆರೆ ಗ್ರಾಮದ ವಿವೇಕಾ ವಿದ್ಯಾಸಂಸ್ಥೆಯ ಮಕ್ಕಳು ‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ. ನಂತರ ಮಹಾಂತೇಶ್ ಮಹಾದುರ್ಗ ರಚನೆ ಹಾಗೂ ನಿರ್ದೇಶನದ ‘ಸೋರುತಿಹುದು ಸಂಬಂಧ’ ನಾಟಕ ಪ್ರದರ್ಶನ ನಡೆಯಲಿದೆ. 4ರಂದು ರಾತ್ರಿ 7.30ಕ್ಕೆ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಎ.ಸಿ.ರಮೇಶ್ ವಹಿಸಲಿದ್ದು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಬಳಿಕ 9ಗಂಟೆವರೆಗೆ ತತ್ವ ಪದಗಳ ಗಾಯನ, ನಂತರ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ರಚನೆಯ ಹಾಗೂ ಜಗದೀಶ್ ಆರ್.ಜಾಣಿ ನಿರ್ದೇಶನದ ‘ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶವಿರಲಿದೆ ಎಂದು ಮಿತ್ರಕೂಟದ ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.