ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ(ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರ ಶಾಲಾ ಐಕ್ಸ್ ಆನ್ವೀಕ್ಷ್ಯಂ-2024 ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಉಜಿರೆ ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಚಾಂಪಿಯನ್ ಷಿಪ್ ಪಡೆದಿದ್ದಾರೆ. ಹಿರಿಯರ ವಿಭಾಗದ ಭಾವಗೀತೆಯಲ್ಲಿ ಬ್ರಾಹ್ಮೀ ಜೈನ್ ಪ್ರಥಮ, ದೇಶಭಕ್ತಿ ಗೀತೆ(ಗುಂಪು) ಪ್ರಥಮ ಹಾಗೂ ಚಿತ್ರಕಲೆಯಲ್ಲಿ ಸಾತ್ವಿಕ್ ಭಟ್ ಪ್ರಥಮ ಸ್ಥಾನ ಪಡೆದರೆ, ಕಿರಿಯರ ವಿಭಾಗದ ಕಸದಿಂದ ರಸ ಸ್ಪರ್ಧೆಯಲ್ಲಿ ಶಾಲೆ ತೃತೀಯ ಸ್ಥಾನ ಪಡೆದಿದೆ.ವಿಜೇತ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯಶಿಕ್ಷಕ ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಿದ್ದಾರೆ.