ಜಿಲ್ಲೆ

77ನೇ ಸ್ವಾತಂತ್ರ್ಯೋತ್ಸವ; ಇಂದಿನಿಂದ ಮೆಟ್ರೋ ನಿಲ್ದಾಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು: ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.15ರಿಂದ 21ರವರೆಗೆ ಸಾಪ್ತಾಹಿಕ-ಸಾಂಸತಿಕ ಸಂಭ್ರಮಾಚರಣೆ ಏರ್ಪಡಿಸಲಾಗಿದೆ. ನಮ್ಮ ಮೆಟ್ರೋ ಬಣ್ಣದ ಬಳಗ ಹಾಗೂ ಯುವ ಮೌಲ್ಯ ಕಲಾ ವೇದಿಕೆ ಆಶ್ರಯದಲ್ಲಿ ಸಂಜೆ 6.15ರಿಂದ ಹರ್ಡೇಕರ್​ ಮಂಜಪ್ಪ ಅವರ 'ಎಲ್ಲಿಗೆ ಬಂತು- ಯಾರಿಗೆ ಬಂತು?' ನಾಟಕ, ಲಾವಣಿ ಪದಗಳು, ದೇಶಭಕ್ತಿ ಗೀತೆಗಳನ್ನೊಳಗೊಂಡ ಕಾರ್ಯಕ್ರಮ ನಡೆಯಲಿದೆ.