ಜಿಲ್ಲೆ

ಪ್ರತಿಭಾ ಪ್ರದರ್ಶನ ಅಡಿಗಲ್ಲು : ವಿಮಲಾ ರಂಗಯ್ಯ ಅಭಿಮತ ಪ್ರತಿಭಾ ದಿನಾಚರಣೆಗೆ ಚಾಲನೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಪ್ರದರ್ಶನ ಅಡಿಗಲ್ಲು. ವಿದ್ಯಾರ್ಥಿಗಳು ತಮ್ಮ ಕಲಾಸಂಪತ್ತಿನ ಶ್ರೇಷ್ಠತೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ ಹೇಳಿದರು. ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು. ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಸಂಘ, ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಈ ವೇದಿಕೆ ಕಲ್ಪಿಸಲಾಗಿದೆ ಎಂದರು. ಕಾಲೇಜು ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಭಾರತಿ ದಿನೇಶ್, ಕೆ.ಎಸ್.ಎಸ್. ಕಾಲೇಜು ಉಪನ್ಯಾಸಕ ಉದಯ ಕುಮಾರ್ ತೀರ್ಪುಗಾರರಾಗಿದ್ದರು. ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರ್ಕಾರದ ಸಂಚಾಲಕ ಜಯಪ್ರಕಾಶ್ ಆರ್., ಉಪನ್ಯಾಸಕಿ ಸೌಮ್ಯಾ ದಿನೇಶ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಧೃತಿ ಇದ್ದರು. ಯಶಸ್ವಿ ಪ್ರಾರ್ಥಿಸಿದರು. ಕಾಲೇಜು ರೆಡ್‌ಕ್ರಾಸ್ ಘಟಕ ನಾಯಕಿ ಶ್ರುತಿ ಅಶ್ವತ್ ಮಾರ್ಗದರ್ಶನದಲ್ಲಿ ರೆಡ್‌ಕ್ರಾಸ್ ವಿದ್ಯಾರ್ಥಿಗಳು ಕಲಾತ್ಮಕವಾಗಿ ವೇದಿಕೆ ನಿರ್ಮಿಸಿದ್ದರು. ವಿದ್ಯಾರ್ಥಿನಿ ಶ್ರುತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಧೃತಿ ಸ್ವಾಗತಿಸಿದರು. ನಿರೀಕ್ಷಾ ವಂದಿಸಿದರು. ಉಪನ್ಯಾಸಕಿ ಶ್ರುತಿ ಅಶ್ವಥ್ ಸಹಕರಿಸಿದರು.

ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆ ಸರ್ವರಿಗೂ ತಿಳಿಸುವ ಉದ್ದೇಶದಿಂದ ಸಾಂಸ್ಕೃತಿಕ ತಂಡ ರಚಿಸಲಾಗುತ್ತದೆ. ತಂಡವನ್ನು ಸಂಘದ ಸಂಚಾಲಕರ ನೇತೃತ್ವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜುಗೊಳಿಸಲಾಗುವುದು. ಕುಕ್ಕೆ ಸೇರಿದಂತೆ ವಿವಿಧ ಊರುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಲೇಜಿನ ತಂಡ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಸೋಮಶೇಖರ ನಾಯಕ್ ಪ್ರಾಚಾರ್ಯ https://www.vijayavani.net/samasta-foundation-day-celebration https://www.vijayavani.net/samasta-foundation-day-celebration