ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ದಿನ ನಿಮಿತ್ತ ಧಾರವಾಡದ ಫ್ರೆ೦ಡ್ಸ್ ಸೋಶಿಯಲ್ ಕ್ಲಬ್ ವತಿಯಿಂದ ಮಾ. 21ರಂದು ಸಂಜೆ 5 ಗಂಟೆಗೆ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ನಿರ್ದೇಶಕ ಡಾ.ಶಶಿಧರ ನರೇಂದ್ರ, ಸವಿತಾ ಅಮರಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು. ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸುವರು. ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಉಪಸ್ಥಿತರಿರುವರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪೂರ್ಣಿಮಾ ಮುಕ್ಕುಂದಿ, ವಿದುಷಿ ನಾಗರತ್ನ ಹಡಗಲಿ, ಡಾ. ವೀಣಾ ಬಿರಾದಾರ, ಅನ್ನಪೂರ್ಣ ಲಿಂಬಿಕಾಯಿ, ಅನನ್ಯ ಶಂಬಯ್ಯ ಹಿರೇಮಠ ಅವರಿಗೆ ಸನ್ಮಾನಿಸಲಾಗುವುದು. ನಂತರ ಡಾ. ಪೂರ್ಣಿಮಾ ಮುಕ್ಕುಂದಿ ಅವರಿಂದ ಸುಗಮ ಸಂಗೀತ, ಸಿರಿಗಂಧ ಜಾನಪದ ಕಲಾ ಬಳಗದ ಪ್ರಕಾಶ ಕಂಬಳಿ ಮತ್ತು ಸಂಗಡಿಗರಿಂದ ಜೋಗತಿ ನೃತ್ಯ, ಹರ್ಲಾಪುರದ ಶರೀಫ್ ದೊಡ್ಡಮನಿ ಮತ್ತು ತಂಡದಿಂದ ಜಾನಪದ ಗಾಯನ, ವಿದುಷಿ ನಾಗರತ್ನ ಹಡಗಲಿ ಮತ್ತು ತಂಡದಿಂದ ವಚನ ನೃತ್ಯ, ಡಾ. ಗುರುಬಸವ ಮಹಾಮನೆ ಮತ್ತು ತಂಡದಿಂದ ವಯೋಲಿನ್ ವಾದನ, ಯುವ ಡಾನ್ಸ್ ಅಕಾಡೆಮಿಯ ರಮೇಶ ಪಾಟೀಲ ಮತ್ತು ತಂಡದಿಂದ ಜಾನಪದ ನೃತ್ಯ, ಡಾ. ಪರಶುರಾಮ ಕಟ್ಟಿಸಂಗಾವಿ, ಸ್ವರ ಸಂವಾದಿನಿ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.