ಅಳವಂಡಿ ಎಸ್‌ಎಸ್‌ಪಿಯು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಹಿರಿಯ ಶಿಕ್ಷಕಿ ಸಂಪಕ್ಕ ಚಾಲನೆ ನೀಡಿದರು. ಶಿಕ್ಷಕರಾದ ಎಚ್.ಎನ್.ಲಮಾಣಿ, ವಾಸವಿ ಸರ್ವಶೆಟ್ಟಿ, ಗಾಯತ್ರಿ ಮಾಲಿಪಾಟೀಲ್, ನವೀನ ಇನಾಮದಾರ, ಅಂಬರೀಶ, ನೀಲಪ್ಪ, ಮಂಜುನಾಥ ಇತರರಿದ್ದರು. 
ಜಿಲ್ಲೆ

ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆ ಓದಿಗೆ ಸಹಕಾರಿ

ಅಳವಂಡಿ: ವಿದ್ಯಾರ್ಥಿಗಳು ಪಠ್ಯದ ಜತೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ ದೇಹಕ್ಕೆ ತಾಕತ್ತು ನೀಡಿದರೆ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸನ್ನು ಉಲ್ಲಾಸಗೊಳಿಸುವ ಜತೆಗೆ ಓದಿಗೂ ಸಹಕಾರಿಯಾಗಲಿವೆ ಎಂದು ಹಿರಿಯ ಶಿಕ್ಷಕಿ ಸಂಪಕ್ಕ ಗೊಲ್ಲರ ಹೇಳಿದರು.

ಗ್ರಾಮದ ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ಪ್ರೌಢಶಾಲಾ ವಿಭಾಗದಿಂದ ವಲಯ ಮಟ್ಟದ ಕ್ರೀಡಾಪಟುಗಳ ಆಯ್ಕೆಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುಚಟಿಕೆಗಳಿಂದ ದೂರ ಉಳಿದು ಹೆಚ್ಚಾಗಿ ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಉತ್ತಮ ಆರೋಗ್ಯ, ಕಲಿಕಾಸಕ್ತಿ ಹೆಚ್ಚಿಸಲಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಹನುಮಂತ ಲಮಾಣಿ ಮಾತನಾಡಿ, ಮೊಬೈಲ್ ಬಳಕೆ ಕಡಿಮೆ ಮಾಡಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಶಿಕ್ಷಕರಾದ ವಾಸವಿ ಸರ್ವಶೆಟ್ಟಿ, ಗಾಯತ್ರಿ ಮಾಲಿಪಾಟೀಲ್, ಶಕುಂತಲಾ ಹಿರೇಮಠ, ನವೀನ ಇನಾಮದಾರ, ಮಂಜುನಾಥ ಕೊಪ್ಪಳ, ಮಹೇಶ ಮಾಳೆಕೊಪ್ಪ, ಅಂಬರೀಶ, ಚನ್ನಯ್ಯ ಹಿರೇಮಠ, ಗಣೇಶ ಕೋಗಳಿ, ನೀಲಪ್ಪ ಹಕ್ಕಂಡಿ, ಭೀಮರಡ್ಡಿ, ಪ್ರವೀಣ ಕುಮಾರ, ಬಸವರಾಜ ಇತರರಿದ್ದರು.