ಹುಬ್ಬಳ್ಳಿ: ಬಾಡಿಗೆ ಕೊಟ್ಟ ಮನೆಯಲ್ಲಿಯೇ ಮನೆಯ ಮಾಲೀಕನ ಪುತ್ರ ಕಳವು ಮಾಡಿ ಸಿಕ್ಕಿಬಿದ್ದಿರುವ ಘಟನೆ ಇಲ್ಲಿಯ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯ್ಕರ ರಸ್ತೆಯ ಮೌಲಾಲಿ ಬ್ಲಾಕ್‌ನಲ್ಲಿ ನಡೆದಿದ್ದ ಮನೆಗಳ್ಳತನದಲ್ಲಿ ಜುನೇದ್ ಅಕ್ಬರ್‌ಅಲಿ ಮಲಬಾರ್(19)ನನ್ನು ಬಂಧಿಸಲಾಗಿದೆ. ಬಾಡಿಗೆದಾರ ಅಸ್ಲಾಂ ಮನಿಯಾರ ಊರಿಗೆ ಹೋದಾಗ ಮನೆ ಕೀಲಿ ಮುರಿದು 20 ಗ್ರಾಂ ಬಂಗಾರ, 275 ಗ್ರಾಂ ಬೆಳ್ಳಿ ಹಾಗೂ 10 ಸಾವಿರ ರೂ. ಕಳವು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಪ್ರಕರಣ ಭೇದಿಸಿದ ಶಹರ ಠಾಣೆ ಪೊಲೀಸರು ಕಳವು ಮಾಡಿದ್ದ ಜುನೇದ್‌ನನ್ನು ಬಂಧಿಸಿದ್ದಾರೆ.