ಸಂಬರಗಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಆದರ್ಶ ಮೌಲ್ಯಗಳನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಉತ್ತಮ ಅಭ್ಯಂತರ ಹೇಳಿದರು.
ಸಮೀಪದ ಸಿದ್ದೇವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗುರು ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆಗಳ ಭಾಗವಾಗಿ ಗ್ರಾಮೀಣ ಭಾಗದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ ಕುಮಾರ ಕೋಡತೆ, ಸುನೀಲ ಮಾನೆ, ಡಾ.ವಿಠ್ಠಲ ತಕತರಾವ, ಶ್ರೀಕೃಷ್ಣ ಜುಗಳೆ, ಪ್ರಾಚಾರ್ಯೆ ಸಂಗೀತಾ ಲೂಟಿ, ಎಸ್.ಬಿ.ಬಲೂಜನವರು, ಎಸ್.ಬಿ.ಕೊಳ್ಳೇಕರ, ಬಿ.ಎನ್.ಬಡಿಗೇರ, ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ ಕನಗಲಿ, ಎಸ್.ವಿ. ಮೂರೆ ಇತರರಿದ್ದರು.