ಅಮೀನಗಡ ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪುಸ್ಕಕ ಜೋಳಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಕವಿ ಸತ್ಯಾನಂದ ಪಾತ್ರೋಟ, ಚೇರ್ಮನ್ ಐ.ಎಸ್. ಲಿಂಗದಾಳ, ಹಿರಿಯ ಲೇಖಕ ಜಿ.ಕೆ. ತಳವಾರ ಇತರರಿದ್ದರು. 
ಜಿಲ್ಲೆ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಅಮೀನಗಡ: ಪ್ರತಿಯೊಬ್ಬರೂ ಪುಸ್ತಕ್ತ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಿ ಸತ್ಯಾನಂದ ಪಾತ್ರೋಟ ಹೇಳಿದರು.

ಪಟ್ಟಣದ ಸಂಗಮೇಶ್ವರ ಪ್ರೌಡಶಾಲೆಯಲ್ಲಿ ಆಯೋಜಿಸಿದ್ದ ಪುಸ್ತಕ ಜೋಳಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಓದಿನಿಂದ ಜ್ಞಾನಾರ್ಜನೆಯಾಗಿ ಉನ್ನತ ಸ್ಥಾನಕ್ಕೆ ಏರಬಹುದು. ಪುಸ್ತಕಗಳು ಜ್ಞಾನ ಅಳಿಯದಂತೆ ರಕ್ಷಿಸಿ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯುತ್ತವೆ ಎಂದರು.

ಆಧುನಿಕ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ವಿಷಯ. ಇಂತಹ ದಿನಮಾನಗಳಲ್ಲಿ ಪುಸ್ತಕ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.

ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಟಿವಿ, ಮೊಬೈಲ್ ಪ್ರಭಾವದಿಂದ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರಿಂದ ಮಕ್ಕಳಲ್ಲಿ ಪುಸ್ತಕ ಓದುವುದನ್ನು ಉತ್ತೇಜಿಸಿದರೆ ಉತ್ತಮ ಹವ್ಯಾಸ ರೂಡಿಸಿದಂತಾಗುವುದು ಎಂದು ತಿಳಿಸಿದರು.

ಚೇರ್ಮನ್ ಐ.ಎಸ್. ಲಿಂಗದಾಳ, ಹಿರಿಯ ಲೇಖಕ ಜಿ.ಕೆ. ತಳವಾರ, ಉಪಪ್ರಾಚಾರ್ಯ ಆರ್.ಜಿ. ಸನ್ನಿ ಮಾತನಾಡಿದರು.
ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ 108 ಜನ ಬೋಧಕ, ಬೋಧಕೇತರ ಸಿಬ್ಬಂದಿಗೆ ಸಂಸ್ಥೆ ಅಧ್ಯಕ್ಷ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀ ಸನ್ಮಾನಿಸಿದರು.

ಚೇರ್ಮನ್ ಆರ್.ಕೆ. ಗೌಡರ, ಎ.ಕೆ. ತಾಳಿಕೋಟಿ, ಡಾ. ಮಹಾದೇವ ಹಾದಿಮನಿ, ಸಿ.ಡಿ. ಇಲಕಲ್, ಪ್ರಾಚಾರ್ಯ ಎಂ.ಎನ್. ವಂದಾಲ, ಮುಖ್ಯಶಿಕ್ಷಕ ಎಸ್.ಎಸ್. ಹಿರೇಮಠ ಇತರರಿದ್ದರು.