ವಿಜಯಪುರದ ಶಿವಚಿದಂಬರೇಶ್ವರ ಸಾಂಸತಿಕ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾರಧಾಮ ಯಾತ್ರಾ&ಪ್ರವಾಸ ಕಥನವನ್ನು ಸಾಹಿತಿ ಭಾರತಿ ಪಾಟೀಲ ಬಿಡುಗಡೆಗೊಳಿಸಿದರು. ಸಿ.ಎಸ್​. ಕಣಕಾಲಮಠ, ಮಹಾಂತೇಶ ಯರಂತೆಲಿಮಠ ಮತ್ತಿತರರಿದ್ದಾರೆ. 
ಜಿಲ್ಲೆ

ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಿ

ಗಿರೀಶ ಸಗರ

ವಿಜಯಪುರ: ಪುಸ್ತಕ ಓದುವುದರಿಂದ ಎಷ್ಟು ಜ್ಞಾನ ಸಂಪಾದಿಸಲು ಸಾಧ್ಯವೋ, ಅಷ್ಟೇ ಜ್ಞಾನ ಪ್ರವಾಸ ಮಾಡುವುದರಿಂದಲೂ ಸಂಪಾದನೆ ಮಾಡಬಹುದಾಗಿದೆ ಎಂದು ಕಸಾಪ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಹೇಳಿದರು.

ನಗರದ ಶಿವಚಿದಂಬರೇಶ್ವರ ಸಾಂಸತಿಕ ಭವನದಲ್ಲಿ ಇತ್ತೀಚೆಗೆ ಮಹಾಂತೇಶ ಯರಂತೆಲಿಮಠ ಅವರ ಕೃತಿ ಚಾರಧಾಮ ಯಾತ್ರಾ&ಪ್ರವಾಸ ಕಥನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಚಾರಧಾಮ, ವೈಷ್ಣೋದೇವಿ, ಸೋಮನಾಥದಂಥ ಜ್ಯೋರ್ತಿಲಿಂಗಗಳ ದರ್ಶನಕ್ಕಾಗಿ ಯಾತ್ರೆ ಮಾಡುವುದರಿಂದ ಅಧ್ಯಾತ್ಮದತ್ತ ಒಲವು ಗಳಿಸಬಹುದು ಎಂದರು.

ನಿವೃತ ಶಿಕ್ಷಕ ಸಿ.ಎಸ್​. ಕಣಕಾಲಮಠ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಮತ್ತು ವಾಣಿಶ್ರೀ ಪ್ರಾರ್ಥಿಸಿದರು. ಲೇಖಕ ಮಹಾಂತೇಶ ಯರಂತೆಲಿಮಠ ಸ್ವಾಗತಿಸಿದರು. ಸಾಹಿತಿ ಮಹಾದೇವ ರಬಿನಾಳ ಪುಸ್ತಕ ಪರಿಚಯಿಸಿದರು. ಚಂದ್ರಶೇಖರ ಗಂಟೆಪ್ಪಗೋಳ ನಿರೂಪಿಸಿದರು. ಅಕ್ಕಮಹಾದೇವಿ ಪಾಟೀಲ ಲೇಖಕರಿಗೆ ಸನ್ಮಾನಿಸಿ, ಪ್ರವಾಸದ ಮಹತ್ವ ತಿಳಿಸಿದರು. ಉಮಾ ವಂದಿಸಿದರು.