ಜಿಲ್ಲೆ

ದೇಶ ಪ್ರೇಮ ಬೆಳೆಸಿಕೊಳ್ಳಿ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಅಕ್ಷಯ ನಗರದ ದ್ಯಾವಪ್ಪನವರ -ವಳಸಂಗ ಎಜುಕೇಷನ್ ಆ್ಯಂಡ್ ಅಕಾಡೆಮಿಕ್ ಟ್ರಸ್ಟ್‌ನ ಚೇತನ ಪಬ್ಲಿಕ್ ಶಾಲೆಯಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರೌಢ ಶಾಲೆ ಪ್ರಾಚಾರ್ಯ ಎಂ.ಎಂ. ಕರೇಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ? ಎಂಬುದನ್ನು ಅರಿತುಕೊಳ್ಳಬೇಕು. ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಸಂವಿಧಾನದ ನಿಯಮ ಪಾಲಿಸಬೇಕು. ನಮ್ಮ ಸಂವಿಧಾನ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜದ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಡಿವಿಇ ಅಕಾಡೆಮಿ ಅಧ್ಯಕ್ಷ ಪ್ರೊ.ಜಿ.ವಿ. ವಳಸಂಗ, ಕಾರ್ಯದರ್ಶಿ ಪ್ರೊ. ಮಹೇಶ ದ್ಯಾವಪ್ಪನವರ, ಪ್ರಾಚಾರ್ಯ ಎಂ.ಎಂ. ಕರೇಗೌಡರ, ಐಸಿಎಸ್‌ಸಿ ವಿಭಾಗದ ಮುಖ್ಯೋಪಾಧ್ಯಾಯಿನಿ ಆಡ್ರಿ ಪ್ರಿನ್ಸ್ ಉತ್ತಂಗಿ ಅವರು ಗಾಂಧೀಜಿ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಪ್ರಜ್ವಲಾ ಶೆಟ್ಟಿ ಸ್ವಾಗತಿಸಿದರು. ಸಿಂಚನಾ ಪ್ರಸಾದ್ವಿ ಭಾಷಣ ಮಾಡಿದರು. ಅಲೈನಾ ಮುದೇನೂರ ನಿರೂಪಿಸಿದರು. ಪ್ರಜ್ವಲ ಕೋರಿ ವಂದಿಸಿದರು.