ಅಡವಿಬಾವಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಶಿಕ್ಷಣ ಸಂಯೋಜಕ ಮುಕ್ತುಂಸಾಬ್ ತಾಳಿಕೋಟಿ ಉದ್ಘಾಟಿಸಿದರು. ಬಿಆರ್‌ಪಿ ಅಪ್ಪಣ್ಣ, ಮುಖ್ಯಶಿಕ್ಷಕ ಸಿದ್ದಮ್ಮ ಪಾಟೀಲ್, ಶಿಕ್ಷಕರಾದ ಸಂತೋಷ್, ಪ್ರಿಯಾಂಕಾ ಇತರರಿದ್ದರು. 
ಜಿಲ್ಲೆ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ನರೇಶ್ ಕುಮಾರ್

ಲಿಂಗಸುಗೂರು: ದೇಶದ ಪ್ರಗತಿಗೆ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದು ಶಿಕ್ಷಣ ಸಂಯೋಜಕ ಮುಕ್ತುಂಸಾಬ್ ತಾಳಿಕೋಟಿ ಹೇಳಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ತಾಲೂಕಿನ ಅಡವಿಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಮನುಷ್ಯನ ಬದುಕಿನ ಪ್ರತಿ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ. ಮಕ್ಕಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಲು ಪ್ರಾಥಮಿಕ ಶಾಲಾ ಹಂತದಿಂದ ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಬಿಆರ್‌ಪಿ ಅಪ್ಪಣ್ಣ, ಮುಖ್ಯಶಿಕ್ಷಕ ಸಿದ್ದಮ್ಮ ಪಾಟೀಲ್, ಶಿಕ್ಷಕರಾದ ಸಂತೋಷ, ಪ್ರಿಯಾಂಕಾ, ಜಯಲಕ್ಷ್ಮೀ, ವಿಜಯಲಕ್ಷ್ಮೀ ನಾಡಗೌಡ, ಐಶ್ವರ್ಯ ರಾಠೋಡ್ ಇತರರಿದ್ದರು.