ರಬಕವಿ ಬನಹಟ್ಟಿ ತಾಲೂಕು 2ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ರಬಕವಿ ಎಸ್.ಡಿ. ಕೊಟ್ರಶೆಟ್ಟಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಸುಹಾನಿ ಗಿರೀಶ ಮುತ್ತೂರ ಅವರನ್ನು ಮಹಿಳಾ ಸಂಘಟನೆ ಸದಸ್ಯೆಯರು ಸನ್ಮಾನಿಸಿ ಗೌರವಿಸಿದರು. ಅನಂತಮತಿ ಎಂಡೋಳಿ, ಗಿರೀಶ ಮುತ್ತೂರ, ಶಿಲ್ಪಾ ಮುತ್ತೂರ ಇತರರಿದ್ದರು. 
ಜಿಲ್ಲೆ

ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿ

ರಬಕವಿ/ಬನಹಟ್ಟಿ: ಮಕ್ಕಳಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದು ಒಂದು ವಿಶೇಷ ಅನುಭವ. ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆ ಎಂದು ರಬಕವಿಯ ಸಾಮಾಜಿಕ ಕಾರ್ಯಕರ್ತೆ ಡಾ. ಅನಂತಮತಿ ಎಂಡೋಳ್ಳಿ ತಿಳಿಸಿದರು.

ರಬಕವಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳು ಮತ್ತು ಗೆಳೆಯರ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಸುಹಾನಿ ಗಿರೀಶ ಮುತ್ತೂರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪ್ರತಿಭಾವಂತ ಮಕ್ಕಳನ್ನು ಶಿಕ್ಷಕರು ಮತ್ತು ತಂದೆ ತಾಯಿಗಳು ಪ್ರೋತ್ಸಾಹಿಸಬೇಕು ಎಂದರು.

ಸುಹಾನಿ ಮುತ್ತೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೂ ಸೂಕ್ತ ಅವಕಾಶಗಳು ದೊರೆತರೆ ಉತ್ತಮ ಸಾಧನೆ ಮಾಡಬಲ್ಲರು. ಸರ್ವಾಧ್ಯಕ್ಷತೆ ಬಹಳಷ್ಟು ಜವಾಬ್ದಾರಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವುದಾಗಿ ತಿಳಿಸಿದರು.

ಪರಿಷತ್ ಪದಾಧಿಕಾರಿ ಕಿರಣ ಆಳಗಿ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.

ಮಮತಾ ಕೊಠಾವಳೆ, ಶ್ರೀಯಾ ಎಳೆಮೇಲಿ, ಸ್ವರೂಪಾ ಕೋಟಿ, ಗಿರಿಜಾ ಬುರ್ಲಿ, ರಾಮಚಂದ್ರ ಪತ್ತಾರ, ಮಹಾದೇವಪ್ಪ ಮುತ್ತೂರ, ಶಿಲ್ಪಾ ಮುತ್ತೂರ, ಗಿರೀಶ ಮುತ್ತೂರ, ವಿಶ್ವಜ ಕಾಡದೇವರ ಇತರರಿದ್ದರು.