ಜಿಲ್ಲೆ

ಮಕ್ಕಳಲ್ಲಿ ಪೌರಾಣಿಕ ನಾಟಕಗಳ ಅಭಿರುಚಿ ಹೆಚ್ಚೆಚ್ಚು ಬೆಳಸಿ: ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ |Mythological Dramas

Mythological Dramas: ನಾನು ಚಿಕ್ಕವನಾಗಿದ್ದಾಗ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳನ್ನು ನೋಡುತ್ತಾ ಬೆಳದಿದ್ದೇನೆ. ಪೌರಾಣಿಕ ನಾಟಕ ರೂಪಗಳಲ್ಲಿ ಇತಿಹಾಸ, ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳುತ್ತಿದ್ದೇವು ಹಾಗೂ ನೋಡುತ್ತಿದ್ದೇವು. ಪ್ರಸ್ತುತ ನಾಟಕ ಕಲಾವಿದರು ರಾಜರ ಪಾತ್ರಗಳನ್ನು ಹಾಕಿಕೊಳ್ಳುವ ಮೂಲಕ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಹೇಳಿದರು.

ಬೆಂಗಳೂರಿನಲ್ಲಿ ಪದ ಸಂಸ್ಥೆ ಹಮ್ಮಿಕೊಂಡಿರುವ ಪೌರಾಣಿಕ ನಾಟಕ ಪ್ರದರ್ಶನದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇವತ್ತಿಗೂ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳೆಂದರೆ ಹಬ್ಬದಂತೆ ಆಚರಿಸುತ್ತಾರೆ. ನಮ್ಮ ಮಕ್ಕಳಿಗೂ ಕೂಡ ನಾಟಕಗಳ ಅಭಿರುಚಿಯನ್ನು ಹಚ್ಚಿಸಿದರೆ ಮಾತ್ರ ಅವರು ಸಾಂಸ್ಕೃತಿಕವಾಗಿ ಸರಿಯಾದ ದಾರಿಯಲ್ಲಿ ನಡೆಯುತ್ತಾರೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಪೌರಾಣಿಕ ನಾಟಕಗಳು ನಶಿಸಿ ಹೋಗುತ್ತಿದ್ದು, ಅವುಗಳನ್ನೆಲ್ಲಾ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕೂಡ ಕಾರ್ಯಪ್ರವೃತವಾಗಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಕೆ.ಪಿ.ಅಶ್ವತ್ ನಾರಾಯಣ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಇವತ್ತಿಗೂ ಪ್ರಸ್ತುತವಾಗಿದೆ. ಅದರ ಉಳಿವಿಗೆ ಸರ್ಕಾರ ಪ್ರಯತ್ನಿಸಬೇಕು ಎಂದರು.

ಹಿರಿಯ ಪೌರಾಣಿಕ ರಂಗನಿರ್ದೇಶಕರಾದ ಕಲ್ಲೂರ್ ಶ್ರೀನಿವಾಸ್ ಅವರಿಗೆ ಕಾರ್ಯಕ್ರಮದಲ್ಲಿ ಪದ ಗೌರವ ನೀಡಿ ಗೌರವಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಿಪಿಓ ಚಂದ್ರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕವಿಯತ್ರಿ ವಿಜಯಲಕ್ಷ್ಮಿ, ಸಂಸ್ಥೆಯ ಅಧ್ಯಕ್ಷ ಅವಿರತ ಹರೀಶ್​, ಕಾರ್ಯದರ್ಶಿ ಪದ ದೇವರಾಜು, ನಾಟಕ ಸಂಘಟಕರಾದ ಶಿವಲಿಂಗು ಸೇರದಂತೆ ಇತರಿದ್ದರು.