ಜಿಲ್ಲೆ

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲಿ

ಇಟಗಿ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಕ್ರೀಡೆಗಳ ಪಾತ್ರ ಪ್ರಮುಖ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯ ರುದ್ರಪ್ಪ ತುರಮರಿ ಹೇಳಿದರು.

ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಗುರ ವತಿಯಿಂದ ಹಮ್ಮಿಕೊಂಡಿದ್ದ ಕೇಂದ್ರ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುವ ಮೂಲಕ ಸುಂದರ ವ್ಯಕ್ತಿತ್ವ ನಿರ್ಮಾಣಕ್ಕೆ ವಿದ್ಯಾರ್ಥಿ ಜೀವನ ಸಾರ್ಥಕವಾಗಿ ಬಳಸಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಕೆ.ಆರ್​.ದೊಂಡಪ್ಪನವರ, ಸಿಆರ್​ಪಿ ಜಂಬೂ ಠಕ್ಕಾಯಿ ಮಾತನಾಡಿದರು. ಪಿಡಿಒ ವೀರೇಶ ಸಜ್ಜನ, ವಿಜಯಕುಮಾರ ಸಾಣಿಕೊಪ್ಪ, ಶ್ರೀಶೈಲ ತುರಮರಿ, ಶಂಕರ ಗಣಾಚಾರಿ, ಆರ್​.ವಿ.ನಂದಿಹಳ್ಳಿ, ತುಕಾರಾಮ ಕೇದಾರಿ, ಸುಂದರ ಕುಲಕರ್ಣಿ, ಬಸವರಾಜ ತುರಮರಿ, ಬಾಹುಬಲಿ ಮುನವಳ್ಳಿ, ಭೀಮರಾವ ಬಾಳಪ್ಪನವರ, ರಾಜೇಂದ್ರ ಮುರಗೋಡ, ವಿ.ಎಸ್​.ಚರಂತಿಮಠ, ಅರವಿಂದ ಪಾಟೀಲ ಇತರರಿದ್ದರು.