ಜಿಲ್ಲೆ

ಸಹಕಾರ ಕ್ಷೇತ್ರದ ಮೂಲಕ ಅಧಿಕಾರ ವಿಕೇಂದ್ರೀಕರಣ

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಹಕಾರಿ ಕ್ಷೇತ್ರದ ಮೂಲಕ ಅಧಿಕಾರ ವಿಕೇಂದ್ರಿಕರಣ ಸಾಧ್ಯವಾಗಿದೆ. ಕೆಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಇಲಾಖೆ ಸ್ಥಾಪಿಸಿರುವುದರಿಂದ ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ಸದೃಢವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿಗಳ ಮೂಲಕ ಪ್ರಾರಂಭವಾದ 25 ಹೊಸ ಸಿಎಸ್​ಸಿ (ಕಾಮನ್​ ಸರ್ವೀಸ್​ ಸೆಂಟರ್​) ಕೇಂದ್ರ ಉದ್ಘಾಟಿಸಿ, ಮಾತನಾಡಿದರು. ಪ್ರಸ್ತುತ 30 ಕೋಟಿ ಜನರು ಸಹಕಾರಿ ಕ್ಷೇತ್ರದಲ್ಲಿದ್ದು, ಮುಂದಿನ 10 ವರ್ಷಗಳಲ್ಲಿ ಸುಮಾರು 60 ಕೋಟಿ ಜನರನ್ನು ಸಹಕಾರಿ ಕ್ಷೇತ್ರ ವ್ಯಾಪ್ತಿಗೆ ಒಳಪಡುವಂತೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಜುಲೈ 25ರಂದು ಅಹಮದಾಬಾದ್​ನಲ್ಲಿ ದೇಶದ ಮೊದಲ ತ್ರಿಭುವನ್​ ಸಹಕಾರಿ ವಿಶ್ವವಿದ್ಯಾನಿಲಯಕ್ಕೆ ಶಿಲಾನ್ಯಾಸ ನೆರವೇರಲಿದೆ. ಪೆಟ್ರೋಲ್​ ಬಂಕ್​, ಗ್ಯಾಸ್​ ಏಜೆನ್ಸಿ, ಬಾಡಿಗೆ ಕಾರುಗಳು ಸೇರಿದಂತೆ ಎಲ್ಲ ಕಡೆಗಳಿಗೂ ಸಹಕಾರಿ ಕ್ಷೇತ್ರ ವ್ಯಾಪಿಸಲಿದೆ ಎಂದರು.

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಜಿ. ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ನಿರ್ದೇಶಕರಾದ ಮಂಜುನಾಥ ಎಸ್​.ಕೆ., ಭಾರತೀ ಭಟ್​, ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ಶರಣ ಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜೇಶ್​ ಕಾರ್ಯಕ್ರಮ ನಿರೂಪಿಸಿ, ವಿಜಯ್​ ವಂದಿಸಿದರು.