ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದ ನೀರು ಸೋರಿಕೆ ತಡೆಗಟ್ಟಲು ಟೆಕ್ನಿಕಲ್ ಟೀಂ ಸಿದ್ಧತೆ ಕೊಂಡಿತು. ಟೆಕ್ನಿಕಲ್ ಟೀಂನ ಮುಖ್ಯಸ್ಥ ಶ್ರೀಧರ, ಈಜು ತಜ್ಞರಾದ ಹರೀಶ, ಮಂಜುನಾಥ ಹಾಗೂ ಅನಿಲ್‌ಕುಮಾರ್ ಇದ್ದರು. 
ಜಿಲ್ಲೆ

ಕ್ರಸ್ಟ್‌ಗೇಟ್‌ಗಳ ಶಾಶ್ವತ ರಿಪೇರಿಗೆ ಕ್ರಮ

ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದಿಂದ ಸೋರಿಕೆಯಾಗುತ್ತಿದ್ದ ನೀರನ್ನು ತಡೆಗಟ್ಟಲು ಮಂಗಳವಾರ ಸಿದ್ಧತೆ ನಡೆಯಿತು.

ಟೆಕ್ನಿಕಲ್ ಟೀಂ ಮುಖ್ಯಸ್ಥ ಶ್ರೀಧರ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಈಜು ತಜ್ಞರಾದ ಹರೀಶ, ಮಂಜುನಾಥ ಹಾಗೂ ಅನಿಲ್‌ಕುಮಾರ್ ನೇತೃತ್ವದಲ್ಲಿ ನಡೆದ ಕೆಲಸದಿಂದ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.

5-6 ತಿಂಗಳ ನಂತರ ಡ್ಯಾಂನಲ್ಲಿ ನೀರು ಖಾಲಿಯಾದಾಗ ಕ್ರಸ್ಟ್‌ಗೇಟ್‌ಗಳ ಶಾಶ್ವತ ರಿಪೇರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, 60 ವರ್ಷದ ಈ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳು ರಿಪೇರಿಯಾಗಬೇಕಿದೆ.

ಸದ್ಯಕ್ಕೆ ಮುರಿದಿರುವ ಒಂದು ಕ್ರಸ್ಟ್‌ಗೇಟ್ ರಿಪೇರಿ ಪ್ರತಿಷ್ಠಿತ ಕಂಪನಿ ಟೆಂಡರ್ ಮೂಲಕ ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಅದರ ಕೆಲಸ ಆರಂಭವಾಗಲಿದೆ ಎಂದರು.