ಖಾನಾಪುರ: ತಾಲೂಕಿನ ಜಾಂಬೋಟಿ ಪ್ರದೇಶದ ತೋರಾಳಿ ಗ್ರಾಮದ ಬಳಿಯ ಸಿಆರ್ಪಿಎ್ ಕೋಬ್ರಾ ಕಮಾಂಡೋ ತರಬೇತಿ ಕೇಂದ್ರದಿಂದ ಯೋಧ ನಾಪತ್ತೆಯಾಗಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಗುಂಟೂರು ಜಿಲ್ಲೆಯ ರೇಪಾಲಿಯ ಭಟ್ಟಿಪರುಲು ತಾಲೂಕಿನ ನಿವಾಸಿ ಎಂ. ರತನ್ ಬಾಬು (39) ನಾಪತ್ತೆಯಾದ ಸೈನಿಕ.ಏಪ್ರಿಲ್ 14, 2025ರಂದು ಬೆಳಗ್ಗೆ 6.30ರ ಸುಮಾರು ನಾಪತ್ತೆಯಾಗಿದ್ದಾನೆ ಎಂದು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಬಗ್ಗೆ ಮಾಹಿತಿ ಸಿಕ್ಕರೆ ಖಾನಾಪುರ ಪೊಲೀಸ್ ಠಾಣೆ ಅಥವಾ ತೋರಾಳಿಯಲ್ಲಿರುವ ಕೋಬ್ರಾ ಕಮಾಂಡೋ ತರಬೇತಿ ಶಿಬಿರ ಸಂಪರ್ಕಿಸಲು ಕೋರಲಾಗಿದೆ.