ಜಿಲ್ಲೆ

ಸಿಆರ್‌ಪಿಎಫ್ ಕಮಾಂಡೆಂಟ್ ಸಾವು

ರಾಜಣ್ಣ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಅಗ್ಗುಂದ ಪಂಚಾಯಿತಿಯ ಸಿದ್ದರಹಳ್ಳಿ ತಾಂಡ್ಯದ ಸಿಆರ್‌ಪಿಎಫ್ ಕಮಾಂಡೆಂಟ್ ಎಸ್.ಕೆ.ರಮೇಶ್‌ನಾಯ್ಕ (53) ಉಸಿರಾಟದ ತೊಂದರೆಯಿಂದ ಅರಸೀಕೆರೆ ಜೆ.ಸಿ. ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟರು.


ರಮೇಶ್‌ನಾಯ್ಕ ಅವರು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪ್ರಸ್ತುತ ಹುದ್ದೆಯಲ್ಲಿ ಇದ್ದು, ಅನಾರೋಗ್ಯ ಕಾರಣದಿಂದ ಹತ್ತು ದಿನಗಳ ಹಿಂದಷ್ಟೇ ತಮ್ಮ ಹುಟ್ಟೂರಿಗೆ ಬಂದಿದ್ದರು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.


ಕಮಾಂಡೆಂಟ್ ರಮೇಶ ನಾಯ್ಕ ಅವರ ಪ್ರಾರ್ಥಿವ ಶರೀರವನ್ನು ಕುಶಾಲತೋಪು ಸಿಡಿಸಿ, ಸರ್ಕಾರಿ ಸಕಲ ಮರ್ಯಾದೆಯಿಂದ ಅಂತ್ಯಸಂಸ್ಕಾರ ನಡೆಸಲಾಯಿತು.