ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲದಲ್ಲಿ ಸೋಮವಾರ ಎಳ್ಳಮವಾಸ್ಯೆ ನಿಮಿತ್ತ ತೇರನ್ನು ಎಳೆಯುತ್ತಿರುವ ಭಕ್ತಗಣ. 
ಜಿಲ್ಲೆ

ಕಂದಹಳ್ಳಿ ಮಹದೇಶ್ವರ ಎಳ್ಳಮವಾಸ್ಯೆಗೆ ಜನಸಾಗರ

ಯಳಂದೂರು: ಕಂದಹಳ್ಳಿ ಗ್ರಾಮದ ಮಹದೇಶ್ವರ ದೇಗುಲದಲ್ಲಿ ಸೋಮವಾರ ಎಳ್ಳಅಮಾವಾಸ್ಯೆ ನಿಮಿತ್ತ ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.

ಇದರ ನಿಮಿತ್ತ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ ಸೇರಿದಂತೆ ಇತರ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿತ್ತು. ದೇಗುಲವನ್ನು ವಿಶೇಷವಾಗಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹರಕೆ ಹೊತ್ತ ಭಕ್ತರು, ದಂಡಗೋಲು ಸೇವೆ, ದೀವಟಿಗೆ ಸೇವೆ ಹಾಗೂ ತೇರನ್ನು ಎಳೆಸುವುದೂ ಸೇರಿದಂತೆ ವಿವಿಧ ಸೇವೆಗಳನ್ನು ಮಾಡುವ ಮೂಲಕ ಭಕ್ತಿ ಮೆರೆದರು. ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿರುವ ದೊಡ್ಡ ಆಲದ ಮರದ ಬೀಳಲುಗಳ ನಡುವೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.