ಉಡುಪಿ: ನವರಾತ್ರಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಭಕ್ತ ಜನಸಂದಣಿ ಕಂಡುಬಂದಿದೆ.
ಶಾಲಾ ಕಾಲೇಜುಗಳಿಗೆ ಮಧ್ಯಾವಧಿ ರಜೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಶುಕ್ರವಾರದಿಂದ ಸತತ 3 ದಿನಗಳಿಂದ ರಜೆ ಇರುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ನಗರಕ್ಕೆ ದೌಡಾಯಿಸಿದ್ದಾರೆ. ಇದರಿಂದ ಮಲ್ಪೆಗೆ ಸಂಪರ್ಕಿಸುವ ಕರಾವಳಿ ಜಂಕ್ಷನ್, ಕೃಷ್ಣಮಠಕ್ಕೆ ಸಂಪರ್ಕಿಸುವ ಕಲ್ಸಂಕ ಜಂಕ್ಷನ್ಗಳಲ್ಲಿ ಕಳೆದ 2 ದಿನಗಳಿಂದ ಸಂಚಾರ ದಟ್ಟಣೆ ವಿಪರೀತವಾಗಿದೆ. ಕೃಷ್ಣ ಮಠದಲ್ಲಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು. ಭಾನುವಾರ ಸಾಯಂಕಾಲ ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದು, ನೂರಾರು ಪ್ರವಾಸಿ ವಾಹನಗಳು ಮಲ್ಪೆ ಕಡೆಗೆ ತೆರಳಿದ್ದರಿಂದ ಮಲ್ಪೆ&ಉಡುಪಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲವು ಕಡೆಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು.
ಉಡುಪಿಗೆ ಭೇಟಿ ನೀಡಿರುವ ಪ್ರವಾಸಿಗರಿಂದಾಗಿ ಹೋಮ್ ಸ್ಟೇ ವಸತಿಗೃಹ, ರೆಸಾರ್ಟ್ಗಳು, ಹೋಟೆಲ್ ರೂಂಗಳು ಭರ್ತಿಯಾಗಿದ್ದು, ಕೆಲವರು ರೂಮಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು.