ಜಿಲ್ಲೆ

ಕೋಟಿ ವೃಕ್ಷ್ಷಅಭಿಯಾನಕ್ಕೆ ವಿಧ್ಯುಕ್ತ ಚಾಲನೆ

ಹರ್ಷ ನ.ಪುರೋಹಿತ

ನ್ಯಾಮತಿ: ತಾಲೂಕಿನ ಗೋವಿನಕೊವಿ ಸಮೀಪದ ಗಡ್ಡೆ ರಾಮೇಶ್ವರ ದೇವಾಲಯದ ನಡುಗಡ್ಡೆಯಲ್ಲಿ ಸೋಮವಾರ ದಾವಣಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮೋಹನ್ ಕೋಟಿ ವೃಕ್ಷ್ಷ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ದೇವಾಲಯ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತಿಯಲ್ಲಿ ವಿವಿಧ ಜಾತಿಯ ಸಸಿ ನೆಡಲಾಯಿತು.

ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳಾದ ಚೇತನ್.ಕೆ.ಆರ್ ಮತ್ತು ಷಣ್ಮುಖ, ಉಪ ವಲಯ ಅರಣ್ಯ ಅಧಿಕಾರಿಗಳಾದ ಬರ್ಕತ್ ಅಲಿ ಮತ್ತು ಶಿವಯೋಗಿ ಇದ್ದರು.

ಶಾಲಿನಿ ಮಂಜುನಾಥ್, ಗಸ್ತು ವನಪಾಲಕರು, ಅರಣ್ಯ ವೀಕ್ಷಕರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ಇಲಾಖೆಯ ವಿವಿಧ ವಿಭಾಗದ ಸಿಬ್ಬಂದಿ ಇದ್ದರು.