ಜಿಲ್ಲೆ

ಜಮೀನು ವಿವಾದಕ್ಕೆ ಬೆಳೆ ನಾಶ

ಎನ್.ವೆಂಕಟೇಶ್

ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಹಾದಿಗೆರೆ ಜಮೀನೊಂದರಲ್ಲಿ ಬೆಳೆದಿದ್ದ ಬೀನ್ಸ್​ ಮತ್ತು ಮೆಣಸಿನಕಾಯಿ ಸಲನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಮಾಡಿಕೆರೆಯ ಆಂಜಪ್ಪ ಎಂಬುವರು 2 ಎಕರೆಯಲ್ಲಿ ಬೆಳೆದಿದ್ದ ಬೀನ್ಸ್​ ಮತ್ತು ಮೆಣಸಿನಕಾಯಿ ಸಲನ್ನು ಮಂಗಳವಾರ ಊಲವಾಡಿ ಗ್ರಾಮದ ಕೆಲವರು ನಾಶಪಡಿಸಿದ್ದು, ಇದಕ್ಕೆ ಜಮೀನು ವಿವಾದವೇ ಕಾರಣ ಎನ್ನಲಾಗಿದೆ ಆಂಜಪ್ಪ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.