ಬ್ಯಾಡಗೊಟ್ಟ ಹಾರೂನ್ ಕಾರು ಕಾಡನೆ ದಾಳಿಗೆ ಗಾಜು ಪುಡಿಯಾಗಿರುವುದು. 
ಜಿಲ್ಲೆ

ಕಾಡಾನೆ ದಾಳಿಗೆ ಬೆಳೆ ನಾಶ

ಲೋಕೇಶ್ ಮನು. ಡಿ

ಶನಿವಾರಸಂತೆ: ಕೊಡ್ಲಿಪೇಟೆ ಸುತ್ತಮುತ್ತ ಕಾಡಾನೆ ದಾಳಿಯಿಂದ ಬೆಳೆ, ವಾಹನ ಹಾನಿಯಾಗಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ.

ಒಂಟಿ ಕಾಡಾನೆಯೊಂದು ವಾರದಿಂದ ಸಮೀಪದ ಕಣಾರಳ್ಳಿ ಗ್ರಾಮದ ಕಾಡು ತೋಟವೊಂದರಲ್ಲಿ ಬೀಡು ಬಿಟ್ಟಿದೆ. ರಾತ್ರಿ ಸಮಯದಲ್ಲಿ ಗ್ರಾಮದ ಸುತ್ತಮುತ್ತಲಿನ ಬ್ಯಾಡಗೊಟ್ಟ, ಬೆಂಬಳೂರು, ಊರುಗುತ್ತಿ, ಮಲ್ಲಳ್ಳಿ, ಶಿವರಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಮನೆಯ ಆವರಣದಲ್ಲಿ ಬೆಳೆದಿರುವ ಬಾಳೆ, ತೆಂಗು ಹಾಗೂ ತೋಟ, ಗದ್ದೆಗಳಲ್ಲಿ ಸಂಚರಿಸಿ ಬೆಳೆ ಹಾನಿ ಮಾಡುತ್ತಿದೆ. ಸಮೀಪದ ಹಾರುನ್ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ಹಾರೂನ್ ಅವರನ್ನು ಕಾರನ್ನು ಶನಿವಾರ ತಡರಾತ್ರಿ ಕಾಡಾನೆಯೊಂದು ಹಾನಿಗೊಳಿಸಿದೆ.

ಕಾಡಾನೆ ದಾಳಿಯಿಂದ ಭಾಗದ ಜನರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಕೂಡಲೇ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.