ಸರಗೂರು ತಾಲೂಕಿನ ಹಳೆಹೇಗ್ಗುಡಿಲು ಗ್ರಾಮದ ನವೀನ್ ಅವರ ಜಮೀನಿನಲ್ಲಿ ಕಾಡಾನೆ ದಾಳಿ ಮಾಡಿ ಬೆಳೆ ನಾಶ ಮಾಡಿರುವುದು. 
ಜಿಲ್ಲೆ

ಕಾಡಾನೆ ದಾಳಿಗೆ ಬೆಳೆ ನಾಶ

ಸರಗೂರು: ತಾಲೂಕಿನ ಹಳೆಹೇಗ್ಗುಡಿಲು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆ ಹಾನಿಯಾಗಿದೆ.

ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಹೇಗ್ಗುಡಿಲು ಗ್ರಾಮದ ನವೀನ್ ಅವರ ಜಮೀನಿಗೆ ದಾಳಿ ಇಟ್ಟ ಕಾಡಾನೆ, ಹತ್ತಿ, ಟೊಮ್ಯಾಟೊ, ತೆಂಗಿನ ಸಸಿ ಹಾಗೂ ಪಂಪ್‌ಸೆಟ್ ಪರಿಕರ ತುಳಿದು ನಾಶಪಡಿಸಿದೆ.

ಹಲವು ದಿನಗಳಿಂದ ಸುತ್ತಮುತ್ತಲ ತೋಟಗಳಲ್ಲಿಯೇ ಬಿಡುಬಿಟ್ಟಿರುವ ಕಾಡಾನೆಯು ರೈತರ ಜಮೀನುಗಳಿಗೆ ದಾಳಿ ಇಡುತ್ತಿದ್ದು, ಕೃಷಿಕರು, ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಕಾಡಾನೆ ಅರಣ್ಯಕ್ಕೆ ಓಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.