ವಿಜಯವಾಣಿ ಸುದ್ದಿಜಾಲ ಗದಗ
ಕಳೆದ ವರ್ಷ ತುಂಬಿದ ಬೆಳೆವಿಮಾ ಹಣ ಇದುವರೆಗೂ ಪಾವತಿ ಆಗಿಲ್ಲ. ಜಿಲ್ಲೆಯ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಹಾಗೂ ಬೆಳೆ ವಿಮಾ ಜಮೆ ಮಾಡಬೇಕು ಎಂದು ಆಗ್ರಹಿಸಿ ರೈತ ಹಿತಾಭಿವೃದ್ಧಿ ಸಂದ ವತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಂದ ಅಧ್ಯಕ್ಷ ಕರಬಸಯ್ಯ ನಾಲ್ವತ್ವಾಡಮಠ ಮಾತನಾಡಿ, ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ರೈತರಿಗೆ ಬೆಳೆ ವಿಮಾ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗಿದೆ. ಗದಗ ಜಿಲ್ಲೆಯ ರೈತರಿಗೆ ಹಣ ಜಮೆ ಆಗಿಲ್ಲ. ಕೂಡಲೇ ವಿಮಾ ಹಣ ರೈತರ ಬ್ಯಾಂಕ ಖಾತೆಗೆ ಜಮೆ ಮಾಡಬೇಕು. ಬೆಳೆ ಪರಿಹಾರವನ್ನು ಶೇ. 25 ರಷ್ಟು ನೀಡಲಾಗಿದೆ. ಎ್ಐಡಿ, ಆಧಾರ ಕಾರ್ಡ ನೆಪ ಹೇಳುತ್ತಿರುವ ಕೃಷಿ ಇಲಾಖೆ ಬೆಳೆ ಪರಿಹಾರವನ್ನು ರ್ಪೂಣ ಪ್ರಮಾಣದಲ್ಲಿ ನೀಡಬೇಕು ಎಂದು ಹೇಳೀದರು.
ಪರಮೇಶ್ವರಪ್ಪ ಜಂತ್ಲಿ, ಬಸವರಾಜ ಕವಳಿಕಾಯಿ, ವಿ. ಎಚ್. ದೇಸಾಯಿಗೌಡ್ರ, ಬಸಪ್ಪ ಕಲಬಂಡಿ, ವಿರೂಪಾಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಮೋಹನ ಇಮರಾಪೂರ, ಮಲ್ಲಪ್ಪ ಬಳ್ಳಾರಿ, ಬಸವರಾಜ ಹುಬ್ಬಳ್ಳಿ, ನರಸಪ್ಪ ತುಕ್ಕಪ್ಪನವರ, ವಿರುಪಾಪ್ಪ ಹೆಬ್ಬಳ್ಳಿ, ಕಳಕಪ್ಪ ರೇವಡಿ, ಪರಪ್ಪ ಕಮತರ, ಕ್ಕಿರಗೌಡ ಪಾಟೀಲ, ಮಂಜುನಾಥ ಕೋಳಿವಾಡ, ಸತೀಶ ಗಿಡ್ಡಹನಮಣ್ಣವರ, ಮುತ್ತಪ್ಪ ಜಡಿ ಹಲವರು ಇದ್ದರು.
ಗದಗ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಪಾವತಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕ್ಕಿರಗೌಡ ಪಾಟೀಲ, ಮಂಜುನಾಥ ಕೋಳಿವಾಡ, ಸತೀಶ ಗಿಡ್ಡಹನಮಣ್ಣವರ, ಮುತ್ತಪ್ಪ ಜಡಿ ಹಲವರು ಇದ್ದರು.