ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳಿಂದ ವ್ಯಾಪ್ತಿಯ ಅನೇಕ ರೈತರು ಬೆಳೆದ ಬೆಳೆಗಳನ್ನು ತಿಂದು, ತುಳಿದು ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಷ್ಟ ಪಡಿಸಿದ ಘಟನೆ ನಡೆದಿದೆ.
ಸೀಗೆಹೊಸೂರು ಗ್ರಾಮದ ವಿರೂಪಾಕ್ಷ ಮತ್ತು ಪುರುಷೋತ್ತಮ ಎಂಬವರ ಜಮೀನಿಗೆ ಜೇನುಕಲ್ಲು ಬೆಟ್ಟದ ಭಾಗದಿಂದ ಬಂದ ಕಾಡಾನೆಗಳು ಜಮೀನಿನಲ್ಲಿ ಬೆಳೆಸಲಾಗಿದ್ದ ಸಿಹಿ ಗೆಣಸು, ಬಾಳೆ, ಮೆಕ್ಕೆಜೋಳದ ಬೆಳೆಗಳನ್ನು ನಷ್ಟ ಪಡಿಸಿವೆ. ಸ್ಧಳಕ್ಕೆ ಹೆಬ್ಬಾಲೆ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.