ಕಾರವಾರ: ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು 251 ಹೆಕ್ಟೇರ್(630 ಎಕರೆ) ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಮಳೆಯಿಂದ ಮುಂಡಗೋಡ ಭಾಗದಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು. ಕೃಷಿ ಹಾಗೂ ಕಂದಾಯ ಇಲಾಖೆ ಅಽಕಾರಿಗಳು ಜಂಟಿ ಸಮೀಕ್ಷೆ ನಡೆಸಿದ್ದು, `ಪರಿಹಾರ' ಎಂಬ ಸರ್ಕಾರದ ವೆಬ್‌ಸೈಟ್‌ನಲ್ಲಿ ಬೆಳೆ ಹಾನಿ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಮುಂಡಗೋಡಿನಲ್ಲಿ ಮೆಕ್ಕೆ ಜೋಳ ಅತಿ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. 251 ಹೆಕ್ಟೇರ್‌ನಲ್ಲಿ 243 ಹೆಕ್ಟೇರ್‌ಗೂ ಅಽಕ ಮುಂಡಗೋಡ ಒಂದೇ ತಾಲೂಕಿನಲ್ಲಿ ಹಾನಿ ಸಂಭವಿಸಿದೆ. ಉಳಿದ ಏಳೆಂಟು ಹೆಕ್ಟೇರ್ ಭತ್ತದ ಬೆಳೆ ಹಾನಿಯು ಶಿರಸಿ ಸೇರಿ ವಿವಿಧ ತಾಲೂಕುಗಳಲ್ಲಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಎಷ್ಟು ಪರಿಹಾರ..?
ಶೇ.33 ಕ್ಕಿಂತ ಹೆಚ್ಚು ಹಾನಿ ಸಂಭವಿಸಿದಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಖುಷ್ಕಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಪರಿಹಾರ ಸಿಗಲಿದೆ. ಸದ್ಯ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 8500 ರೂ. ಘೋಷಿಸಿದೆ. ಒಟ್ಟಾರೆ ಹೆಕ್ಟೇರ್‌ಗೆ 17 ಸಾವಿರ ರೂ. ಇನ್‌ಪುಟ್ ಸಬ್ಸಿಡಿ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಲಿದೆ. ಬೆಳೆ ವಿಮಾ ಕಂತು ಪಾವತಿ ಮಾಡಿದ್ದಲ್ಲಿ ಇನ್‌ಪುಟ್ ಸಬ್ಸಿಡಿ ದೊರಕಿದರೂ ಬೆಳೆ ವಿಮೆಯ ಪರಿಹಾರವೂ ದೊರೆಯಲಿದೆ ಎಂದು ಅಽಕಾರಿಗಳು ಮಾಹಿತಿ ನೀಡಿದ್ದಾರೆ.
12 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಜಿಲ್ಲೆಯಲ್ಲಿ 12 ಹೆಕ್ಟೇರ್‌ಗಳಷ್ಟು ಅಡಕೆ, ಬಾಳೆ ಸೇರಿ ವಿವಿಧ ತೋಟಗಾರಿಕೆ ಬೆಳೆ ಹಾನಿ ಪರಿಹಾರಕ್ಕೆ ಅರ್ಹವಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಪ್ರತಿ ಹೆಕ್ಟೇರ್‌ಗೆ 22 ಸಾವಿರ ರೂ. ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದರೆ 25 ಸಾವಿರ ರೂ.ಗಳವರೆಗೂ ಪರಿಹಾರ ದೊರೆಕುವ ಸಾಧ್ಯತೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಪಿ.ಸತೀಶ ವಿಜಯವಾಣಿಗೆ ತಿಳಿಸಿದ್ದಾರೆ. ಶೇ.5 ರಷ್ಟು ಹೆಚ್ಚುವರಿ ಮಳೆ ಜಿಲ್ಲೆಯಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸರಾಸರಿ 2,769 ಮಿಮೀ ಮಳೆಯಾಗಿದೆ. ಜಿಲ್ಲೆಯ ಈ ಅವಽಯ ಸರಾಸರಿ ಮಳೆಯ ಪ್ರಮಾಣ 2,647 ಮಿಮೀ ಇದ್ದು, ಶೇ.5 ರಷ್ಟು ಹೆಚ್ಚುವರಿ ಮಳೆ ಬಿದ್ದಂತಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ, ಈ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಳೆ ಹದವಾಗಿ ಬಿದ್ದಿದ್ದು, ಬೆಳೆ ನಷ್ಠ ಕಡಿಮೆಯಾಗಿದೆ. ಜಿಲ್ಲೆಯ ಹಳಿಯಾಳದಲ್ಲಿ ಶೇ.34 ರಷ್ಟು ಮಳೆಯ ಕೊರತೆ ಉಂಟಾಗಿದ್ದು, ಯಲ್ಲಾಪುರ ಶೇ.28, ದಾಂಡೇಲಿ ಶೇ.22 ರಷ್ಟು ಮಳೆಯ ಕೊರತೆ ಉಂಟಾಗಿದೆ. ಕಾರವಾರದಲ್ಲಿ ಶೇ.34, ಸಿದ್ದಾಪುರದಲ್ಲಿ ಶೇ.36 ಹಾಗೂ ಶಿರಸಿಯಲ್ಲಿ ಶೇ. 35 ರಷ್ಟು ಸರಾಸರಿಗಿಂತ ಹೆಚ್ಚು ಮಳೆಯಾಗಿದೆ.
ಬೆಳೆ ಹಾನಿ ಸಮೀಕ್ಷಾ ಕಾರ್ಯ ಮುಕ್ತಾಯವಾಗಿದೆ. ಕಂದಾಯ ಅಽಕಾರಿಗಳು ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡುವ ಕಾರ್ಯ ನಡೆಸಿದ್ದಾರೆ. ನಂತರ ರೈತರ ಖಾತೆಗಳಿಗೆ ನೇರವಾಗಿ ಇನ್‌ಪುಟ್ ಸಬ್ಸಿಡಿ ಜಮಾ ಆಗಲಿದೆ. ಶಿವಪ್ರಸಾಸ ಗಾಂವಕರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ