ಜಿಲ್ಲೆ

ಬಿಜೆಪಿ ನಿಯೋಗದಿಂದ ಬೆಳೆ ಹಾನಿ ಪರಿಶೀಲನೆ ಆರಂಭ

ಡಿ.ವಿ. ಕಮ್ಮಾರ

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅತಿವೃಷ್ಠಿಯಿಂದ ಹಾನಿಗೀಡಾದ ಜಿಲ್ಲೆಯ ರೈತರ ಬೆಳೆಗಳ ಪರಿಶೀಲನೆಗೆ ಬಿಜೆಪಿ ನಿಯೋಗ ಮುಂದಾಗಿದ್ದು, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ನೇತೃತ್ವದ ತಂಡ ನೇಸರಗಿ ಮೂಲಕ ತಮ್ಮ ಬೆಳೆ ಹಾನಿ ಪರಿಶೀಲನೆ ಆರಂಭಿಸಿದೆ.
ಬೈಲಹೊಂಗಲ ತಾಲ್ಲೂಕಿನ ನೇಸರಗಿಯಲ್ಲಿ ಮಳೆಯಿಂದ ಹಾನಿಗೊಳಗಾದ ಕ್ಯಾರೇಟ್, ಸೋಯಾಅವರೆ, ಮೆಂತೆ ಬೆಳೆಗಳನ್ನು ಬಿಜೆಪಿ ನಾಯಕರು ವೀಕ್ಷಿಸಿದರು.

ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಬಿಜೆಪಿ ನಿಯೋಗ


ವೀಕ್ಷಣೆಗೂ ಮೊದಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ರಿಂದ ಆರ್. ಅಶೋಕ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಪರಿಷತ್ ಸಚೇತಕ ಎನ್.ರವಿಕುಮಾರ ಮಾಹಿತಿ ಪಡೆದುಕೊಂಡರು.
ಬಳಿಕ ಗದ್ದೆಗೆ ಇಳಿದು, ಬೆಳೆಯನ್ನು ಪರಿಶೀಲಿಸಿದರು.
ಈ ವೇಳೆ ತಮ್ಮ ಸಮಸ್ಯೆ ಹೇಳಿಕೊಂಡ ರೈತರು, ನಮ್ಮ ಸಂಕಷ್ಟ ಆಲಿಸಲು ಸಚಿವರು, ಸ್ಥಳೀಯ ಶಾಸಕರು ಬಂದಿಲ್ಲ. ಅಧಿಕಾರಿಗಳೂ ಸಮೀಕ್ಷೆ ನಡೆಸಿಲ್ಲ  ದೂರಿದರು.
ಈ ವೇಳೆ ಸಂಸದ ರಮೇಶ ಜಿಗಜಿಣಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ವಿಠ್ಠಲ ಹಲಗೇಕರ, ಅಭಯ ಪಾಟೀಲ, ಸಿದ್ದು ಸವದಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಜಗದೀಶ ಮೆಟಗುಡ್ ಇತರರಿದ್ದರು.

ರೈತರ ಗದ್ದೆಯಲ್ಲಿ ಬೆಳೆ ಪರಿಶೀಲಿಸಿದ ಬಿಜೆಪಿ ನಾಯಕರು.