ಜಿಲ್ಲೆ

ಕೈಕೊಟ್ಟ ಮಳೆ ಒಣಗುತ್ತಿದೆ ಬೆಳೆ

ಮಳೆ ಬರದೆ ಹೊಲದಲ್ಲಿ ಒಣಗುತ್ತಿರುವ ಜೋಳ

ಚಿಕ್ಕಬಳ್ಳಾಪುರ ಡೆಸ್ಕ್

ಸುಡು ಬಿಸಿಲಿಗೆ ಒಣಗುತ್ತಿದೆ ಚಿಗುರೊಡೆದ ರಾಗಿ&ಜೋಳ : ಆತಂಕದಲ್ಲಿ ರೈತ

ಚೇತನ್​, ಮಂಚೇನಹಳ್ಳಿ
ಬಿತ್ತಿದ್ದರೂ ಮೊಳಕೆ ಬಂದಿಲ್ಲ.. ಅಲ್ಪಸ್ವಲ್ಪ ಬಂದ ಮೊಳಕೆ ಮೇಲೆಳುತ್ತಿಲ್ಲ. ಚಿಗುರೊಡೆದು ಬೆಳೆದಿರುವ ರಾಗಿ ಮತ್ತು ಜೋಳ ಬಾಡುತ್ತಿದೆ. ಇದು ಜಿಲ್ಲಾದ್ಯಂತ ಕಂಡು ಬರುತ್ತಿರುವ ದೃಷ್ಯ.
ಈ ಬಾರಿ ಮುಂಗಾರು ಮಳೆ ವಿಳಂಬವಾಗಿತ್ತು. ಜುಲೈ ಮೊದಲ ವಾರದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಭರದಿಂದ ಸಾಗತೊಡಗಿತ್ತು. ಆದರೆ ಕಳೆದ 4 ವಾರದಿಂದ ಜಿಲ್ಲೆಯಲ್ಲಿ ಮಳೆ ಬಾರದ ಕಾರಣ ಬೆಳೆ ಸುಡು ಬಿಸಿಲಿಗೆ ಒಣಗುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿ ಗಾಳಿ ಬೀಸುವುದರಿಂದ ಅನೇಕ ಕಡೆ ಭೂಮಿ ಬಿರುಕು ಬಿಡುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮಾತ್ರ ಅಲ್ಪಸ್ವಲ್ಪ ತೇವಾಂಶವಿದ್ದರೂ ಬೆಳೆಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.
ಜಿಲ್ಲೆಯಲ್ಲಿ ರೈತರು ಸಾವಿರಾರು ಹೆಕ್ಟೇರ್​ನಲ್ಲಿ ರಾಗಿ ಮತ್ತು ಜೋಳ ಹಾಕಿದ್ದು, ಮಳೆಯಿಲ್ಲದೆ ಈಗ ಮುದೂಡಿ ನೆಲಕ್ಕೆ ಬೀಳುತ್ತಿದ್ದು, ರೈತರು ಆಕಾಶಕ್ಕೆ ಕೈ ಚಾಚುವಂತಾಗಿದೆ.

ನೀರಾವರಿದ್ದವರು ಬಚಾವ್​:
ನೀರಾವರಿ ಇರುವ ರೈತರ ಬೆಳೆಗಳು ಮಾತ್ರ ಹಚ್ಚು ಹಸಿರಿನಿಂದ ಕೂಡಿದ್ದು, ಉಳಿದ ಬೆಳೆಯೆಲ್ಲ ನಾಶದತ್ತ ಸಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ನೀರಾವರಿ ಹೊಂದಿರುವರ ಬಳಿ ಹಣ ಕೊಟ್ಟು ನೀರನ್ನು ಕೊಂಡುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡುತ್ತದೆ. ಆದರೆ ನಿರೀತ ಮಟ್ಟದಲ್ಲಿ ಮಳೆ ಬರುತ್ತಿಲ್ಲ. ಕೇವಲ ಹತ್ತಾರು ಹನಿಗಳು ಬಿದ್ದು ಮಾಯವಾಗುತ್ತಿದೆ. ಇದರಿಂದ ರೈತರು ಭಾನಿನತ್ತ ನೋಡುತ್ತ ದಿನ ಸಾಗುಸುವಂತಾಗಿದೆ.

ಸಾಲದ ಸುಳಿಗೆ ಅನ್ನದಾತ:
ಗ್ರಾಮೀಣ ಪ್ರದೇಶದ ಸಾಕಷ್ಟು ರೈತರು ಸಾಲ ಮಾಡಿ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಕಳೆದ ಎರಡು ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ. ಈ ಬಾರಿಯೂ ಚೆನ್ನಾಗಿ ಬೆಳೆ ಬಂದು ಸಲು ಬರುತ್ತೆ ಸಾಲ ಕೊಟ್ಟು ಲಾಭಗಳಿಸಬಹುದು ಎಂಬ ನಿರೀೆಯಲ್ಲಿದ್ದರು. ಆದರೆ ಮಳೆ ರೈತನ ನಿರೀೆ ಮತ್ತು ಆಸೆಯನ್ನು ಸುಳ್ಳಾಗಿಸಿದ್ದು, ಸಾಲದ ಸುಳಿಗೆ ಸಿಲುಕುವಂತಾಗಿದೆ.

ಜನವರಿಯಿಂದ ಆಗಸ್ಟ್​ವರೆಗೆ ಮಳೆ ಮಾಹಿತಿ

ತಾಲೂಕು ವಾಡಿಕೆ ಮಳೆ( ಮಿ,ಮೀ) ಆಗಿರುವ ಮಳೆ(ಮಿ,ಮೀ)
ಚಿಕ್ಕಬಳ್ಳಾಪುರ 361 275
ಗೌರಿಬಿದನೂರು 297 257
ಚಿಂತಾಮಣಿ 306 279
ಗುಡಿಬಂಡೆ 292 279
ಬಾಗೇಪಲ್ಲಿ 279 243
ಶಿಡ್ಲಟ್ಟ 327 275

ಬಾಕ್ಸ್​
ನಮಗಿರುವ ಮೂರು ಎಕರೆ ಜಮೀನಿನಲ್ಲಿ ಕಳೆದ ತಿಂಗಳಲ್ಲಿ ಜೋಳ ಹಾಕಿದ್ದೆವು, ಕಳೆದ ದಿನಗಳಲ್ಲಿ ಬಿದ್ದ ಅಲ್ಪಸ್ವಲ್ಪ ಮಳೆಗೆ ಉತ್ತಮವಾಗಿ ಬೆಳೆ ಬಂದಿದೆ. ಇತ್ತೀಚಿಗೆ ರಸ ಗೋಬ್ಬರ ಸಹ ಹಾಕಿದ್ದೇನೆ. ಆದರೆ ಕಳೆದ ಹಲವು ದಿನಗಳಿಂದ ಮಳೆ ಬಾರದೆ ಬೆಳೆ ಬಾಡುತ್ತಿದೆ. ಮುಂದೆ ಮಳೆ ಆಗದಿದ್ದರೆ ಬೆಳೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ.

ಆನಂದ್​ ರೈತ , ಜೋಳ ಬೆಳೆಗಾರ

ಮಳೆ ಬಂದು ಬೆಳೆ ಚೆನ್ನಾಗಿ ಪಸಲು ಬರುತ್ತೆ ತೆಗೆದುಕೊಂಡ ಸಾಲ ತೀರಿಸಿ, ನಾವು ಸ್ವಲ ಹಣಗಳಿಸಬಹುದು ಎಂದು ರೈತರು ಸಾಲ ಮಾಡಿ ರಾಗಿ ಹಾಕಿದ್ದಾರೆ. ಈಗ ಮಳೆ ಕೈಕೊಟ್ಟಿದ್ದರಿಂದ ಸಾಲಗಳಿಗೆ ಸಿಲುಕುವಂತಾಗಿದೆ. ಇನ್ನು 4&5 ದಿನಗಳಲ್ಲಿ ಮಳೆ ಬರದೆ ಇದ್ದರೆ ಮೊಳಕೆಯೊಡೆದ ಬೆಳೆಯಲ್ಲ ನಾಶವಾಗುತ್ತದೆ.

ಕಾರ್ತಿಕ್​,ರಾಗಿ ಬೆಳೆಗಾರ