ಜಿಲ್ಲೆ

ಬೆಳೆ ವಿಮೆ ನಷ್ಟ ಪರಿಹಾರ ಇತ್ಯರ್ಥಕ್ಕೆ ಅವಕಾಶ

ಬೆಳಗಾವಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆ ನಷ್ಟದ ಮಾಹಿತಿಯನ್ನು ಸ್ವಯಂ ನಿರ್ಧರಣೆ ಮಾಡಿ, ಬೆಳೆ ವಿಮೆ ನಷ್ಟ ಪರಿಹಾರ ಇತ್ಯರ್ಥ ಪಡಿಸಲು ಅವಕಾಶ ಒದಗಿಸಲಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆಲಿ ಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು-ಮಿಂಚುಗಳಿಂದಾಗಿ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಬಹುದಾಗಿದೆ.

ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಂಡ ರೈತರು ಯೋಜನೆಯ ಲಾಭ ಪಡೆಯಬಹುದು. ರೈತರು ಈ ಬಗ್ಗೆ ನೇರವಾಗಿ ವಿಮೆ ಕಂಪನಿಯ ಆಯಾ ತಾಲೂಕು ಪ್ರತಿನಿಧಿಗಳು ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣಗಳೊಂದಿಗೆ 72 ಗಂಟೆಯೊಳಗೆ ಸಂಪರ್ಕಿಸಬೇಕು.
ಮಾಹಿತಿಗೆ ತಾಲೂಕುವಾರು ಪ್ರತಿನಿಧಿಗಳು/ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಅಥಣಿ (ಆನಂದ) ಮೊ: 9019183018, ಬೈಲಹೊಂಗಲ (ಗಿರಿಗೌಡ) 8867555625, ಬೆಳಗಾವಿ(ಸಿದ್ದರಾಮ) 636443542, ಚಿಕ್ಕೋಡಿ (ದತ್ತಾತ್ರೇಯ) 8722334452, ಗೋಕಾಕ (ಸುರೇಶ) 9972361250, ಹುಕ್ಕೇರಿ (ಚೇತನ) 9663408096 ಖಾನಾಪುರ ಹಾಗೂ ಚೆ.ಕಿತ್ತೂರ (ಭರತೇಶ) 9108098246, ರಾಯಬಾಗ (ಕಿರಣ ಕಾಂಬಳೆ) 7349397137, ರಾಮದುರ್ಗ (ವೆಂಕಟೇಶ) 9740870233 ಹಾಗೂ (ಮಲ್ಲಿಕಾರ್ಜುನ) 9972062891, ಸವದತ್ತಿ (ಅಉ): 9980601978, ಜಿಲ್ಲಾ ಪ್ರತಿನಿಧಿ (ಬಾಲರಾಜ) 7204868840, ಜಿಲ್ಲಾ ಪ್ರತಿನಿಧಿ/ಕಚೇರಿ (ಶರ್ೀ) 9152007672 ಮತ್ತು ರಾಜ್ಯ ಪ್ರತಿನಿಧಿ/ಕಚೇರಿ 9740594807 ಹಾಗೂ ಸ್ಥಳೀಯ ಬ್ಯಾಂಕ್‌ಗಳು, ಸಹಕಾರಿ ಸಂಘಗಳು, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು
ಸಂಪರ್ಕಿಸಲು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವನಗೌಡ ಪಾಟೀಲ ತಿಳಿಸಿದ್ದಾರೆ.