ಸಮಾಜವಾದಿ ಪಕ್ಷದ ತಾಲೂಕು ಘಟಕದಿಂದ ಯಲಬುರ್ಗಾದ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ಬೆಳೆ ವಿಮೆ ವಿಸ್ತರಣೆಗೆ ಕಾಲಾವಕಾಶ ನೀಡಲು ಮನವಿ

Koppal

ಯಲಬುರ್ಗಾ: ಬೆಳೆ ವಿಮೆ ವಿಸ್ತರಣೆಗೆ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಸಮಾಜವಾದಿ ಪಕ್ಷದ ತಾಲೂಕು ಘಟಕದಿಂದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಘಟಕದ ತಾಲೂಕು ಅಧ್ಯಕ್ಷ ಸೋಮಲಿಂಗಪ್ಪ ಕೊಳಜಿ ಮಾತನಾಡಿ, ತಾಲೂಕಿನಲ್ಲಿ ಹೆಸರು, ಮೆಕ್ಕೆಜೋಳ ಹಾಗೂ ಶೇಂಗಾ ಸೇರಿದಂತೆ ಮುಂಗಾರಿನಲ್ಲಿ ಬಿತ್ತನೆಯಾದ ಬೆಳೆಗಳಿಗೆ ನಾನಾ ರೋಗಗಳು ಹರಡಿ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಬೆಳೆ ನಾಶ ಪರಿಹಾರ ಘೋಷಿಸಬೇಕು. ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ತುಂಬಲು ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಪಿ.ಎಸ್.ಹಿರೇಮಠ, ರುದ್ರಗೌಡ ಮಕ್ಕಳ್ಳಿ, ಚನ್ನಬಸಯ್ಯ ಮ್ಯಾಗಳಮಠ, ಪ್ರಭುಗೌಡ ಪಾಟೀಲ್ ಇತರರು ಇದ್ದರು.