ಕೂಡ್ಲಿಗಿ ತಹಸಿಲ್ ಕಚೇರಿಯಲ್ಲಿ ಶಿರಸ್ತೇದಾರ್ ಸಲೀಂ ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಸಹ ಕಾರ್ಯದರ್ಶಿ ಬಸವರಾಜ ಸಂಶಿ, ಸದಸ್ಯರಾದ ಸುರೇಶ ಹಲಗಿ, ಜಂಗ್ಲಿಸಾಬ್, ಡಿ.ಮುಕುಂದಗೌಡ ಇತರರಿದ್ದರು. 
ಜಿಲ್ಲೆ

ಬೆಳೆ ನಾಶವಾಗಿದ್ದಕ್ಕೆ ಪರಿಹಾರ ನೀಡಲಿ

Kopala - Desk - Eraveni

ಹೂವಿನಹಡಗಲಿ: ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ವೇಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಸಲೀಂ ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಸೋಮವಾರ ಮನವಿ ಸಲ್ಲಿಸಿತು.

ಪಕ್ಷದ ತಾಲೂಕು ಸಹ ಕಾರ್ಯದರ್ಶಿ ಬಸವರಾಜ ಸಂಶಿ ಮಾತನಾಡಿ, ಕಾಮಗಾರಿ ಆರಂಭಿಸುವ ಸಂದರ್ಭದಲ್ಲಿ ನಿಯಮಾನುಸಾರ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ರೈತರಿಗೆ ಭೂ ಪರಿಹಾರ ನೀಡದೆ ಪೈಪ್‌ಲೈನ್‌ಗಾಗಿ ಕೃಷಿ ಭೂಮಿ ಅಗೆಯಲಾಗಿದೆ. ಇದರಿಂದ ಬೆಳೆ ನಾಶವಾಗಿದ್ದು, ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಜಂಗ್ಲಿಸಾಬ್, ಡಿ.ಮುಕುಂದಗೌಡ, ಇಟಗಿ ನಾಗರಾಜ, ಸುರೇಶ ಹಲಗಿ, ರೈತರಾದ ಮಂಜಪ್ಪ, ಹನೀಫ್, ನಾಗರಾಜ, ರವಿ, ರಾಜು, ಪ್ರಕಾಶ, ಮಾಬುಸಾಬ್ ಇತರರಿದ್ದರು.