ಜಿಲ್ಲೆ

ಬೆಳೆ ಹಾನಿ ಪರಿಶೀಲನೆ

Haveri

ಸವಣೂರ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಾದ ಬೆಳೆ ಹಾನಿಯನ್ನು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ಅಧಿಕಾರಿಗಳು ಭಾನುವಾರ ಪರಿಶೀಲಿಸಿದರು.

ಶುಕ್ರವಾರ ರಾತ್ರಿ ಅಕಾಲಿಕ ಮಳೆಯಿಂದ ಜೋಳ, ಗೋವಿನಜೋಳ, ಹತ್ತಿ ಮತ್ತಿತರ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಪಟ್ಟಣದ ಹೊರವಲಯದ ಯಲ್ಲಪ್ಪಗೌಡ ಪರಸನಗೌಡ ಮುದಿಗೌಡ್ರ ಅವರ 3 ಎಕರೆಯಲ್ಲಿನ ಜೋಳದ ಬೆಳೆ ಹಾನಿಯಾದ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಆಗ ತಹಸೀಲ್ದಾರ್, ಅಧಿಕಾರಿಗಳು ರೈತನಿಗೆ ಧೈರ್ಯ ಹೇಳಿ, ಬೆಳೆ ಹಾನಿ ಸಮೀಕ್ಷೆ ಕೈಗೊಂಡು, ಪರಿಹಾರ ಕುರಿತು ಮೇಲಧಿಕಾರಿಗಳೊಂದಿಗೆ ರ್ಚಚಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಅಧಿಕಾರಿಗಳು ತಾಲೂಕಿನ ಹುರಳೀಕುಪ್ಪಿ, ತೊಂಡೂರ, ಹೊಸಳ್ಳಿ, ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಿಹಳ್ಳಿ ಮೊದಲಾದ ಗ್ರಾಮಗಳಲ್ಲಿನ ಬೆಳೆ ಹಾನಿ ಪರಿಶೀಲಿಸಿದರು. ರವಿ ಮಾಚಕನೂರ, ಇತರರಿದ್ದರು.