ಯಡಕೂರಿಯ ಗ್ರಾಮದ ಸೇತುವೆ ಕೆಳಗೆ ಮೊಸಳೆ ಕಾಣಿಸಿಕೊಂಡಿರುವುದು. 
ಜಿಲ್ಲೆ

ಸೇತುವೆ ಕೆಳಗೆ ಕಾಣಿಸಿಕೊಂಡ ಮೊಸಳೆ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮದ ಯಡಕೂರಿಯ ಗ್ರಾಮದ ಸೇತುವೆ ಕೆಳಗೆ  ಮೊಸಳೆ ಕಾಣಿಸಿಕೊಂಡಿದೆ.

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಇದಾಗಿದ್ದು, ಈ ಹಿಂದೆ ಸೇತುವೆ ಬಳಿ ಪಾರಿವಾಳವನ್ನು ಮೊಸಳೆ ಬೇಟೆಯಾಡಿತ್ತು. ಅಲ್ಲದೆ ನೀರಿಗಿಳಿದಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತ್ತು. ಮೇಕೆ ಮರಿ ತಿಂದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತ್ತು. ಆಗಾಗ್ಗೆ ಕಾವೇರಿ ನದಿ ಬಳಿಯ ಜಮೀನುಗಳಲ್ಲಿ ಮೊಸಳೆ ಕಾಣಿಸಿಕೊಳ್ಳುತ್ತಿತ್ತು.

ಇದೀಗ ಸೇತುವೆ ಕೆಳಗೆ ಮೊಸಳೆ ದಡದ ಕಡೆಗೆ ಬರುವುದನ್ನು ಗ್ರಾಮದ ಯುವಕರು ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.