ತಾಮ್ರಗುಂಡಿ ಗ್ರಾಮದ ಕೆರೆಯಲ್ಲಿ ಬುಧವಾರ ಕಾಣಿಸಿಕೊಂಡ ಮೊಸಳೆ.  
ಜಿಲ್ಲೆ

ತಾಮ್ರಗುಂಡಿ ಕೆರೆಯಲ್ಲಿ ಬುಧವಾರವೂ ಮೊಸಳೆಯ ಆತಂಕ

ಡಂಬಳ: ತಾಮ್ರಗುಂಡಿ ಗ್ರಾಮದ ಕೆರೆಯಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಅಧಿಕಾರಿಗಳ ಕಣ್ಣಿಗೂ ಮೊಸಳೆ ಕಾಣಿಸಿಕೊಂಡಿತು. ಆದರೆ ನೀರಿನಲ್ಲಿ ಮೊಸಳೆ ಜಾರಿಕೊಂಡಿದ್ದರಿಂದ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕೆರೆಯ ನೀರಿಗೆ ಇಳಿಯಬಾರದು ಎಂದು ಸೂಚನಾ ಫಲಕ ಅಳವಡಿಸಲಾಗಿದೆ. ಸುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರುವಂತೆ ಗ್ರಾಪಂ ಸದಸ್ಯರಿಗೆ ತಿಳಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಸೋಮಗೌಡ ಪಾಟೀಲ ತಿಳಿಸಿದರು, ಗಸ್ತು ಅರಣ್ಯ ಪಾಲಕ ಪಕ್ಕಿರಪ್ಪ ಕಾಶಿ ಇತರರಿದ್ದರು.