ಜಿಲ್ಲೆ

ವಿಸರ್ಜನ ವೇಳೆ ಟ್ರ್ಯಾಕ್ಟರ ಗಾಲಿಗೆ ಸಿಲುಕಿ ಯುವಕ ಸಾವು?

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ನಗರದ ಪಾಟೀಲ ಗಲ್ಲಿಯ ಬಳಿ ಗಣೇಶೋತ್ಸವ ವಿಸರ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ ಗಾಲಿಗೆ ಸಿಲುಕಿ ಯುವಕ‌‌ ಮೃತಪಟ್ಟಿರುವ ಘಟನೆ ನಡೆದಿದೆ.

ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಬಂದ್ ಆಗಿದೆ. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಸ್ಟಾಟ್೯ ಮಾಡಲು ತಳ್ಳುತ್ತಿರುವ ಸಂದರ್ಭದಲ್ಲಿ ಸ್ಟಾಟ್೯ ಆಗಿ ಚಾಲಕನ ನಿಯಂತ್ರಣ ಸಿಗದೆ ಯುವಕನಿಗೆ ಗುದ್ದಿದ್ದರಿಂದ ಗಾಲಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರು‌ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾನೆ ಎಂದು‌ ಸ್ಥಳೀಯರು, ಪೊಲೀಸರು ಮಾಹಿತಿ ನೀಡಿದ್ದಾರೆ.